8 ಸ್ಟಾರ್ ಕ್ರಿಕೆಟ್ ಟ್ರೋಫಿ- 2023 ಬಿಕೆ ಅಜಯ್ ಕುಂಜಿಗುಡಿ ಪ್ರಥಮ, ಕೂರ್ಗಿ ವನದುರ್ಗಾ ಕ್ರಿಕೆಟರ್ಸ್ ದ್ವಿತೀಯ

Views: 169
ಕುಂದಾಪುರ: ವಕ್ವಾಡಿ ತೆಂಕಬೆಟ್ಟು 8 ಸ್ಟಾರ್ ಕ್ರಿಕೆಟರ್ಸ್ ಆಯೋಜಿಸಿದ ರಾಜ್ಯ ಮಟ್ಟದ 40 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಬಿಕೆ ಅಜಯ್ ಕುಂಜಿಗುಡಿ ಸಮಗ್ರ ಪ್ರಶಸ್ತಿ ಮತ್ತು ಕೊರ್ಗಿ ವನದುರ್ಗಾ ಕ್ರಿಕೆಟರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರದೀಪ್ ಶೆಟ್ಟಿ ಪಡೆದಿರುತ್ತಾರೆ.
ಉದ್ಘಾಟನಾ ಸಮಾರಂಭ : ಬೆಂಗಳೂರು ಮೈತ್ರಿ ಎಂಟರ್ಪ್ರೈಸಸ್ ಮಾಲಕ ಮಹಾಬಲ ರಾವ್ ಅವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.ಸಂತೋಷ್ ಶೆಟ್ಟಿ ಕುಂದಾಪುರ ಮನೆ ಟ್ರೋಪಿ ಉದ್ಘಾಟಿಸಿದರು.
ವಿಶ್ವನಾಥ್ ಶೆಟ್ಟಿ ಜಡ್ಡಿನ ಮನೆ ಪಂದ್ಯಾಟವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಜೀವರಕ್ಷಕ ಆಪತ್ಬಾಂಧವ ಈಶ್ವರ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.
2ನೇ ತರಗತಿ ಓದುತ್ತಿರುವ ಕ್ಯಾನ್ಸರ್ ಪೀಡಿತೆ ಸೃಷ್ಟಿ ಅವರಿಗೆ ಸಹಾಯಧನ ವಿತರಿಸಲಾಯಿತು.
ಅಧ್ಯಕ್ಷ ಆದರ್ಶ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷ ವಕ್ವಾಡಿ ಹೆಬ್ಬಾಗಿಲು ಮನೆ ಉದಯ್ ಶೆಟ್ಟಿ, ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ರವಿರಾಜ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಜಡ್ಡಿನಮನೆ, ಸಂತೋಷ್ ಶೆಟ್ಟಿ ಕುಂದಾಪುರ ಮನೆ, ಕಾರ್ಯದರ್ಶಿ ವಿನಯ್ ಶೆಟ್ಟಿ, ಶಿಕ್ಷಕ ರಮೇಶ್ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜ್ಞಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಕಾಶ್ ಎಚ್ ಕೆ ಸ್ವಾಗತಿಸಿದರು. ಸುಧಾಕರ್ ವಕ್ವಾಡಿ ನಿರೂಪಿಸಿದರು. ರೋಹಿತ್ ಕಿಣಿ ವಂದಿಸಿದರು.