ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಭಿಮಾನಿ ತನ್ನ ಗೆಳತಿಗೆ ಪ್ರೇಮ ನಿವೇದನೆಯೊಂದಿಗೆ ಸಂಭ್ರಮ!
Views: 117
ಕನ್ನಡ ಕರಾವಳಿ ಸುದ್ದಿ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ, ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಭಿಮಾನಿಯೊಬ್ಬ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿ ಡಬಲ್ ಸೆಲೆಬ್ರೇಷನ್ ಮಾಡಿದ್ದಾನೆ.
ಕ್ರಿಡಾಂಗಣದಲ್ಲಿ ಎಲ್ಲೆಲ್ಲೂ ಸಂಭ್ರಮ ಸಡಗರ ಆವರಿಸಿದ್ದು, ಅಭಿಮಾನಿಗಳ ಸಂತೋಷಕ್ಕಂತೂ ಪಾರವೇ ಇಲ್ಲದಂತಾಗಿದೆ. ಲಕ್ಷಾಂತರ ಅಭಿಮಾನಿಗಳ ಮಧ್ಯೆ ಬಾರತ ತಂಡದ ಆಟಗಾರರು ಗೆಲುವಿನ ನಗೆ ಬೀರಿದ್ದಾರೆ. ಈ ಸಮಯದಲ್ಲಿ ಒಬ್ಬ ಅಭಿಮಾನಿ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಇಂತಹ ಘಟನೆಗಳೂ ಈ ಹಿಂದೆ ಸಾಕಷ್ಟು ನಡೆದಿವೆ, ಅದೇರೀತಿ ಈ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನಡೆದಿದ್ದು ಆ ಯುವಕನಿಗೆ ಡಬಲ್ ಧಮಾಕಾ ಆಗಿದೆ. ವಿಶ್ವಕಪ್ ಗೆದ್ದಿದ್ದಕ್ಕೆ ಇಡೀ ದೇಶವೇ ಸಂಭ್ರಮಿಸುತ್ತಿರುವಾಗ, ಅತ್ತ ಗೆಳತಿಯೂ ಪ್ರೇಮಕ್ಕೆ ‘ಗ್ರೀನ್ ಸಿಗ್ನಲ್’ ನೀಡಿದ್ದು ಆತನ ಸಂತೋಷವನ್ನು ಇನ್ನಷ್ಟು ಜಾಸ್ತಿ ಮಾಡಿದೆ.
ಈ ಅಪರೂಪದ ಕ್ಷಣದ ವೀಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ನೆಟ್ಟಿಗರು ಈ ಜೋಡಿಗೆ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದು, ತಮಾಷೆಯಾಗಿ ಹಾಗೂ ಪ್ರೀತಿಯಿಂದ ಕಾಮೆಂಟ್ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ, ಕ್ರಿಕೆಟ್ ಅಂದರೆ ಕೇವಲ ಆಟವಲ್ಲ, ಅದೊಂದು ಭಾವನೆ ಅನ್ನೊದು ಮತ್ತೊಮ್ಮೆ ಸಾಬೀತಾಗಿದೆ.






