ಇತರೆ

ಶಾರ್ಜಾದಲ್ಲಿ ನಿಗೂಢವಾಗಿ ಕೊಲೆಯಾದ ಪ್ರಕಾಶ್ ಮೃತದೇಹ ಇಂದು ಕುಂದಾಪುರಕ್ಕೆ

Views: 30

ಕನ್ನಡ ಕರಾವಳಿ ಸುದ್ದಿ: ಶಾರ್ಜಾದಲ್ಲಿ ನಿಗೂಢವಾಗಿ ಕೊಲೆಗೀಡಾಗಿರುವ ಕುಂದಾಪುರದ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಶವ ಶಾರ್ಜಾದಿಂದ ಸೆ. 25ರಂದು ಹುಟ್ಟೂರು ಕುಂದಾಪುರಕ್ಕೆ ಬೆಳಿಗ್ಗೆ 6:30ಗಂಟೆಗೆ ಮೊದಲು ಕುಂದಾಪುರದ ಪಾರಿಜಾತ ಹೋಟೆಲ್ ಸಮೀಪದ ಹೊನ್ನನಕೇರಿ ನಿವಾಸಕ್ಕೆ ತರಲಾಗುವುದು. ನಂತರ ಬೆಳಿಗ್ಗೆ 10 ಗಂಟೆಗೆ CSI ಕೃಪಾ ಚರ್ಚ್ ಸಮಾಧಿ ಸ್ಥಳ ಶಾಸ್ತ್ರೀ ಸರ್ಕಲ್ ಕುಂದಾಪುರದಲ್ಲಿ ಅಂತಿಮ ಸಂಸ್ಕಾರವು ನಡೆಯಲಿದೆ.

ಶಾರ್ಜಾದಿಂದ ಪ್ರಕಾಶ್ ಅವರ ಸಂಬಂಧಿಕರು, ಕಂಪೆನಿಯವರು ವಿಮಾನದಲ್ಲಿ ಪಾರ್ಥಿವ ಶರೀರದೊಂದಿಗೆ ಹೊರಟಿದ್ದು ಶುಕ್ರವಾರ ಬೆಳಗ್ಗಿನ ಜಾವ 4-5 ಗಂಟೆಯ ಸುಮಾರಿಗೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಕಳೆದ ವರ್ಷಗಳಿಂದ ಶಾರ್ಜಾದಲ್ಲಿ ಸಿಮನ್ಸ್ ಕಂಪೆನಿಯ ಖಾಸಗಿ ವಿಮಾನ ಯಾನ ಸಂಸ್ಥೆಯ ಟರ್ಮಿನಲ್ -2 ರಲ್ಲಿ ಹಿರಿಯ ಮ್ಯಾನೇಜರ್ ಆಗಿದ್ದ ಅಶ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹವು ಆ.12 ರಂದು ಅಲ್ ಅಮಿನ್ ಎಂಬ ರಸ್ತೆಯ ಪಾರ್ಕಿಂಗ್ ಪ್ರದೇಶದಲ್ಲಿ ಅವರದೇ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ಪತ್ನಿ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

 

Related Articles

Back to top button
error: Content is protected !!