ಇತರೆ

ಸತ್ತಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುವಾಗ ಬದುಕಿ ಬಂದ ಮಹಿಳೆ!

Views: 20

ಕನ್ನಡ ಕರಾವಳಿ ಸುದ್ದಿ: ಸತ್ತಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಮಹಿಳೆ ಜೀವಂತವಾಗಿರುವ ಘಟನೆ ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ನಡೆದಿದೆ.

ವೈದ್ಯರ ಸಮಯಪ್ರಜ್ಞೆಯಿಂದ 63 ವರ್ಷದ ರೇಣುಕಮ್ಮ ಸಂಕೊಳ್ಳಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೇಣುಕಮ್ಮ ಸೋಮವಾರ ರಾತ್ರಿ ತೀವ್ರ ಅಸ್ವಸ್ಥರಾಗಿದ್ದರು. ಕುಟುಂಬಸ್ಥರು ಅವರನ್ನು ಗ್ರಾಮದ ಸ್ಥಳೀಯ ವೈದ್ಯರ ಬಳಿ ಕರೆದೊಯ್ದಿದ್ದರು. ಈ ವೇಳೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಸಿರಾಟವೂ ಕ್ಷೀಣಿಸಿತ್ತು. ಎನ್ನಲಾಗಿದೆ. ರೇಣುಕಮ್ಮ ಮೃತಪಟ್ಟಿದ್ದಾರೆಂದು ಭಾವಿಸಿದ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಿದ್ದರು. ಕೆಲ ಸಂಬಂಧಿಕರು ಅಂತಿಮ ದರ್ಶನಕ್ಕಾಗಿ ಹೂವಿನ ಹಾರಗಳೊಂದಿಗೆ ಆಗಮಿಸಿದ್ದರು. ಈ ವೇಳೆ ರೇಣುಕಮ್ಮ ಅವರ ಎದೆಯ ಭಾಗದಲ್ಲಿ ಉಸಿರಾಟದ ಚಲನೆ ಕಂಡುಬಂದಿದೆ. ಇದರಿಂದ ಕುಟುಂಬಸ್ಥರು ತತ್ ಕ್ಷಣ ಅವರನ್ನು ಹಿರೇಕೆರೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದು, ರೇಣುಕಮ್ಮ ಚಿಕಿತ್ಸೆಗೆ ಸ್ಪಂದಿಸಿದ್ದು, ಆರೋಗ್ಯ ಸ್ಥಿರವಾಗಿದೆ.

ವೈದ್ಯರ ಸಮಯ ಪ್ರಜ್ಞೆಯಿಂದ ಸತ್ತಾಕೆ ಬದುಕಿ ಬಂದಳು!

ಖಾಸಗಿ ವೈದ್ಯರು ತಡ ಮಾಡದೆ ತುರ್ತು ಚಿಕಿತ್ಸೆಯಿಂದ ಕೊನೆಗೂ ರೇಣುಕಾಮ್ಮ ಸಾವಿನ ಸಮೀಪಕ್ಕೆ ಹೋಗಿ ಬಂದಿದ್ದಾರೆ. ಸದ್ಯ ವೈದ್ಯರ ಮುತುವರ್ಜಿಯಿಂದ ನಡೆಸಿದ ಚಿಕಿತ್ಸೆ ಪರಿಣಾಮವಾಗಿ ರೇಣುಕಾಮ್ಮಳ ಆರೋಗ್ಯ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ. ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಕುಟುಂಬಕ್ಕೆ ಮಹಿಳೆ ಮತ್ತೆ ಬದುಕಿಬಂದಿದ್ದು ಪವಾಡದ ರೀತಿ ನಡೆದುಹೋಗಿದೆ.

Related Articles

Back to top button
error: Content is protected !!