ಬೆಟ್ಟಿಂಗ್ ಆಪ್ ಗಳ ವಿರುದ್ಧ ಮೋದಿ ಸಮರ -242 ಗ್ಯಾಂಬ್ಲಿಂಗ್ ವೆಬ್‌ಸೈಟ್‌ಗಳು ಬ್ಯಾನ್ !
Views: 109
ಕನ್ನಡ ಕರಾವಳಿ ಸುದ್ದಿ : ನರೇಂದ್ರ ಮೋದಿ ಸರ್ಕಾರ ಬೆಟ್ಟಿಂಗ್ ಆಪ್‌ಗಳ ವಿರುದ್ಧ ಸಮರ ಸಾರಿದೆ. ಭಾರತ ಸರ್ಕಾರ ಅಕ್ರಮ ಬೆಟ್ಟಿಂಗ್ ದಂದೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮುಂದುವರಿಸಿದೆ.
ಈ ನಿಟ್ಟಿನಲ್ಲಿ ಒಂದೇ ದಿನ 242 ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಬ್ಲಾಕ್ ಮಾಡಿದೆ. 2025ರ ಆಗಸ್ಟ್ ತಿಂಗಳಲ್ಲಿ ಆನ್‌ಲೈನ್ ಗೇಮಿಂಗ್ ಕಾಯ್ದೆಯನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿತು. ಆ ಬಳಿಕ ಆನ್‌ಲೈನ್ ಬೆಟ್ಟಿಂಗ್ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾ ಬರುತ್ತಿದೆ. ಇಲ್ಲಿಯವರೆಗೆ 7,800 ಕ್ಕೂ ಅಧಿಕ ಅಕ್ರಮ ಬೆಟ್ಟಿಂಗ್ ಮತ್ತು ಜೂಜು ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ನಿಷೇಧ ಮಾಡಿದೆ.
ಆನ್‌ಲೈನ್ ಗೇಮಿಂಗ್ ಕಾಯ್ದೆಯ ಹೊಸ ಕಾನೂನು ಜಾರಿಗೆ ಬಂದಾಗಿನಿಂದ ಜಾರಿ ಬಹಳಷ್ಟು ಕಠಿಣವಾಗಿದೆ. ಈಗ, ಅನುಮೋದನೆಯಿಲ್ಲದೆ ನಡೆಯುವ ಅಥವಾ ಬೆಟ್ಟಿಂಗ್ ಮತ್ತು ಜೂಜಾಟದ ಮೇಲಿನ ಭಾರತೀಯ ಕಾನೂನುಗಳನ್ನು ಉಲ್ಲಂಘಿಸುವ ವೇದಿಕೆಗಳ ವಿರುದ್ಧ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬಹುದು.2025ರ ಆಗಸ್ಟ್‌ನಿಂದ 7800 ವೆಬ್‌ಸೈಟ್ ಬ್ಯಾನ್ 2025ರ ಆಗಸ್ಟ್ ತಿಂಗಳಲ್ಲಿ ಆನ್ಸೆನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದಿತು. ಆಗಿನಿಂದ ಇಲ್ಲಿಯವರೆಗೆ 7,800ಕ್ಕೂ ಅಧಿಕ ಅಕ್ರಮ ಬೆಟ್ಟಿಂಗ್ ಮತ್ತು ಜೂಜು (ಗ್ಯಾಂಬ್ಲಿಂಗ್) ಜಾಲತಾಣಗಳ ಲಿಂಕ್‌ಗಳನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ.
ಈ ಕಾಯ್ದೆ ಜಾರಿಯಾಗುವ ಮುನ್ನ, 2022ರಿಂದ 2025ರ ಜೂನ್‌ವರೆಗೆ ಐಟಿ ಕಾಯ್ದೆಯ ಸೆಕ್ಷನ್ 69ಎ ಬಳಸಿ 1,524 ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ವೆಬ್‌ಸೈಟ್‌ಗಳು ಹಾಗೂ ಮೊಬೈಲ್ ಆ್ಯಪ್‌ಗಳನ್ನು ಸರ್ಕಾರ ಬ್ಲಾಕ್ ಮಾಡಿತ್ತು. ಈಗ ಗೇಮಿಂಗ್ ಆ್ಯಕ್ಟ್ ಜಾರಿಯಾಗಿ ನಾಲ್ವೇ ತಿಂಗಳಲ್ಲಿ ಏಳು ಸಾವಿರಕ್ಕೂ ಅಧಿಕ ಜಾಲತಾಣಗಳನ್ನು ತಡೆಯಲಾಗಿರುವುದು ವಿಶೇಷ.ಈ ಅಕ್ರಮ ಸೈಟ್‌ಗಳು ಎಷ್ಟು ಅಪಾಯಕಾರಿ ಎಂದು ಸರ್ಕಾರ ಹೇಳುತ್ತಲೇ ಇದೆ. ಇದು ಕೇವಲ ಹಣದ ಬಗ್ಗೆ ಅಲ್ಲ ವ್ಯಸನ, ಸಾಮಾಜಿಕ ಸಮಸ್ಯೆಗಳಿವೆ ಮತ್ತು ಯುವಜನರು ವಿಶೇಷವಾಗಿ ಅಪಾಯದಲ್ಲಿದ್ದಾರೆ. ಈ ಸೈಟ್‌ಗಳನ್ನು ನಿರ್ಬಂಧಿಸುವುದು, ಡಿಜಿಟಲ್ ಜಾಗವನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿಡುವ ಬಗ್ಗೆ ಕೇಂದ್ರವು ಗಂಭೀರವಾಗಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಬೆಟ್ಟಿಂಗ್ ಸಂಪೂರ್ಣ ಬಂದ್ :ಸದ್ಯ ಪ್ರಸ್ತಾಪಿತ ಕಾನೂನು ಪ್ರಕಾರ ಗೇಮ್ ಆಫ್ ಚಾನ್ಸ್ ಅಂದ್ರೆ ಯಾವುದೇ ಆಟ, ಸ್ಪರ್ಧೆಯ ಫಲಿತಾಂಶಗಳು ಅದೃಷ್ಟದಿಂದ ಅವಲಂಬಿತವಾಗಿರುವ, ಅನಿಶ್ಚಿತತೆಗಳಿಂದ ಕೂಡಿರುವ ಆನ್‌ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಅಥವಾ ಪಂತ ಕಟ್ಟುವ ಚಟುವಟಿಕೆಗಳು ನಿಷಿದ್ಧಪಂಥ ಕಟ್ಟುವುದು, ಹಣ ಇಡುವುದು, ಟೋಕನ್, ವರ್ಚುವಲ್ ಕರೆನ್ಸಿ ಅಥವಾ ಇ-ಫಂಡುಗಳನ್ನು ಇಟ್ಟು ಅಂತರ್ಜಾಲ, ಮೊಬೈಲ್ ಆಪ್ ಅಥವಾ ಇತರೆ ಡಿಜಿಟಲ್ ವೇದಿಕೆಗಳ ಮೂಲಕ ಆಡುವ ಆಟಗಳ ನಿಷೇಧ. ನೋಂದಾಯಿತವಲ್ಲದ ವೇದಿಕೆಗಳ ಮೂಲಕ ಇಂಥ ಆನ್ ಲೈನ್ ಬೆಟ್ಟಿಂಗ್, ಗ್ಯಾಮ್ಮಿಂಗ್ ಸೇವೆ ಕೊಡುವುದು ಸಹ ನಿಷೇಧಿಸಲು ಅವಕಾಶ ಇದೆ. ಅದೇ ಕಾನೂನಿನ ಅಡಿಯಲ್ಲಿ ಮೋದಿ ಸರ್ಕಾರ ಆಪ್ ಗಳನ್ನು ನಿಷೇಧ ಮಾಡಿದೆ.






