ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಜೊತೆ ಸೋಫಿ ಶೈನ್ ನಿಶ್ಚಿತಾರ್ಥ
Views: 34
ಕನ್ನಡ ಕರಾವಳಿ ಸುದ್ದಿ: ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಗೆಳತಿ ಸೋಫಿ ಶೈನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಧವನ್ ಸೋಮವಾರ ತಮ್ಮ ವಿದೇಶಿ ಗೆಳತಿ ಮತ್ತು ಐರಿಶ್ ನಟಿ ಸೋಫಿ ಶೈನ್ ಜೊತೆ ನಿಶ್ಚಿತಾರ್ಥ ಮಾಡಕೊಂಡಿದ್ದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
ಉಂಗುರ ವಿನಿಮಯ ಮಾಡಿಕೊಳ್ಳುವ ಮೂಲಕ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಧವನ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಿಶ್ಚಿತಾರ್ಥದ ಉಂಗುರಗಳ ಫೋಟೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
“ನಾವು ನಿಮ್ಮೊಂದಿಗೆ ಹಂಚಿಕೊಂಡ ಖುಷಿಯ ವಿಷಯಗಳಿಂದ ಹಿಡಿದು ಮುಂದೆ ಹಂಚಿಕೊಳ್ಳಲಿರುವ ಭವಿಷ್ಯದ ಕನಸುಗಳವರೆಗೆ ಎಂದು ಶಿರ್ಷಿಕೆ ನೀಡಿ, ನಮ್ಮ ನಿಶ್ಚಿತಾರ್ಥದ ಈ ಶುಭ ಸಂದರ್ಭದಲ್ಲಿ, ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಮತ್ತು ಶುಭಾಶಯಗಳಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ” ಎಂದು ಧವನ್ ತಿಳಿಸಿದ್ದಾರೆ. ಕ್ರಿಕೆಟಿಗರು, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.






