ವನಿತೆಯರ ಅಂಡರ್-19 ಏಕದಿನ ಕ್ರಿಕೆಟ್ ತಂಡದ ನಾಯಕಿಯಾಗಿ ಕುಂದಾಪುರದ ರಚಿತಾ ಹತ್ವಾರ್ ಅಯ್ಕೆ
Views: 215
ಕನ್ನಡ ಕರಾವಳಿ ಸುದ್ದಿ: ಬಿಸಿಸಿಐ ವತಿಯಿಂದ ಡಿ. 13ರಿಂದ 21ರ ವರೆಗೆ ಹೈದರಾಬಾದಿನಲ್ಲಿ ನಡೆಯುವ ವನಿತೆಯರ ಅಂಡರ್-19 ದೇಶಿ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಂದಾಪುರದ ರಚಿತಾ ಹತ್ವಾರ್ ಕರ್ನಾಟಕ ತಂಡದ ನಾಯಕಿಯಾಗಿ ಅಯ್ಕೆಯಾಗಿದ್ದಾರೆ.
16 ವರ್ಷದ ರಚಿತಾ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ. ಕಶ್ಚಿಕಂಡಿಕುಪ್ಪ ಉಪ ನಾಯಕಿ, ಶ್ರೇಯಾ ಸಿ. ಎರಡನೇ ಕೀಪರ್ ಆಗಿದ್ದಾರೆ.
ರಚಿತಾ ಅವರು ಪ್ರಸಕ್ತ ಸಾಗುತ್ತಿರುವ ಅಂಡರ್-23 ದೇಶಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಪರ ಆಡುತ್ತಿದ್ದು ಆರಂಭಿಕ ಆಟಗಾರ್ತಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ರಚಿತಾ ಕರ್ನಾಟಕ ಹಿರಿಯರ ತಂಡದ ಸಂಭಾವ್ಯ ಆಟಗಾರ್ತಿಯರ ಯಾದಿಯಲ್ಲೂ ಸ್ಥಾನ ಪಡೆದಿದ್ದು, ಮುಖ್ಯ ತಂಡಕ್ಕೂ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ.
ಈಕೆ ಕುಂದಾಪುರ ಪುರಸಭೆ ವ್ಯಾಪ್ತಿಯ ಎಲ್ ಐಸಿ ರಸ್ತೆ ನಿವಾಸಿ ವಕೀಲರಾದ ರಮೇಶ್ ಹತ್ವಾರ್ ಹಾಗೂ ಸರಿತಾ ಹತ್ವಾರ್ ದಂಪತಿಯ ಪುತ್ರಿ. 10ನೇ ವರ್ಷದಿಂದಲೇ ಕ್ರಿಕೆಟ್ ಆಡಲು ಆರಂಭಿಸಿದ್ದು, ಆರಂಭದಲ್ಲಿ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್‌ನ ಮಹಮ್ಮದ್ ಅರ್ಮನ್ ಅವರಿಂದ ತರಬೇತಿ ಪಡೆದಿದ್ದು, ಬೆಂಗಳೂರಿನ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ) ನಲ್ಲಿಇರ್ಫಾನ್ ಶೇಟ್ ಅವರ ಗರಡಿಯಲ್ಲಿ ತರಬೇತಿ ಪಡೆದಿದ್ದಾರೆ.






