50 ಸೆಕೆಂಡ್ ಜಾಹೀರಾತಿಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಈ ನಟಿ ಯಾರು?
Views: 86
ಕನ್ನಡ ಕರಾವಳಿ ಸುದ್ದಿ: ಬಹುಭಾಷಾ ಈ ನಟಿ 50 ಸೆಕೆಂಡ್ ಜಾಹೀರಾತಿಗೆ 5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಆ ನಟಿ ಯಾರು ಅಂತ ನಿಮಗೆ ಗೊತ್ತಾ? ಅದು ಬೇರೆ ಯಾರು ಅಲ್ಲ ಬಹುಭಾಷಾ ತಾರೆ ನಯನತಾರಾ.
ಹಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ನಯನತಾರಾ ಸದ್ಯಕ್ಕೆ ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಈ ನಟಿ ಜವಾನ್ ಒಂದು ಸಿನಿಮಾಗೆ 11 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇತ್ತೀಚೆಗೆ ಬಂದ ಒಂದು ವರದಿಯಲ್ಲಿ ನಯನತಾರಾ ಒಂದು ಆ್ಯಡ್ ಅಂದ್ರೆ ಜಾಹೀರಾತಿಗೆ 50 ಸೆಕೆಂಡ್ಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಈ ಸೂಪರ್ ಸ್ಟಾರ್ ನಟಿ ಇತ್ತೀಚೆಗೆ ಟಾಟಾ ಸ್ಕೈ ಬ್ರ್ಯಾಂಡ್ ಆಗಿ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಒಂದು ಜಾಹೀರಾತು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿತ್ತು.
ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮೊದಲು ನಯನತಾರಾ ಪಾರ್ಟ್ ಟೈಮ್ ಮಾಡಲಿಂಗ್ ಮಾಡುತ್ತಿದ್ದರು ಹಾಗೂ ನಿರೂಪಕಿಯಾಗಿಯೂ ಹಲವು ಶೋಗಳನ್ನು ನಡೆಸಿಕೊಡುತ್ತಿದ್ದರು. ಮೊದಲ ಬಾರಿ ಮನಸ್ಸಿನಕ್ಕರೆ ಅನ್ನೋ ಮಲಯಾಳಂ ಸಿನಿಮಾದ ಮೂಲಕ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದರು. ಮೊದಲ ಸಿನಿಮಾದಲ್ಲಿ ದೊಡ್ಡ ಹಿಟ್ ಆಗಿತ್ತು. ಮೊದಲ ಸಿನಿಮಾವೇ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವ ವಿಷಯದಲ್ಲಿ ನಯನತಾರಾ ಸಿನಿಮಾ ಮಾಡುವ ವಿಷಯದಲ್ಲಿ ಆಲಿಯಾ, ಕರೀನಾ ಕಪೂರ್, ಕತ್ರಿನಾ ಕೈಫ್ ಇವರೆಲ್ಲರಿಗಿಂತ ಮುಂದೆ ಇದ್ದಾರೆ.