ಧಾರ್ಮಿಕ

ಆನೆಗುಡ್ಡೆಯಲ್ಲಿ ವಿನಾಯಕ ಚತುರ್ಥಿ ವಿಜೃಂಭಣೆಯಿಂದ ಸಂಪನ್ನ

Views: 51

ಕನ್ನಡ ಕರಾವಳಿ ಸುದ್ದಿ: ಆನೆಗುಡ್ಡೆ ಶ್ರೀ ವಿನಾಯಕ ಚತುರ್ಥಿಯು ಬಹಳ ವಿಜೃಂಭಣೆಯೊಂದಿಗೆ ಮಳೆಯ ನಡುವೆಯೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.ಶ್ರೀ ದೇವಳ ದರ್ಶನ ಪಡೆದು ಪುನೀತರಾದರು.

ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ, ಮಹಾ ರಂಗ ಪೂಜೆ, ಅಷ್ಟವಧಾನ ಸೇವೆ, ತೊಟ್ಟಿಲುಸೇವೆ ಇನ್ನಿತರ ಸೇವೆಯಲ್ಲಿ ಭಕ್ತರು ಪಾಲ್ಗೊಂಡರು.  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಜನೆ, ದಾಸವಾಣಿ, ಕೊಳಲುವಾದನ, ಯಕ್ಷಗಾನ ಪ್ರದರ್ಶನ ನಡೆಯಿತು.

ಬೆಳಿಗ್ಗೆಯಿಂದ ರಾತ್ರಿವರೆಗೂ ಉಚಿತ ಪ್ರಸಾದ ವಿತರಣೆ ಹಾಗು ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು,ದೇವಳದ ಎಲ್ಲಾ ಕಾರ್ಯಕ್ರಮಗಳನ್ನು ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಶ್ರೀ ವಿನಾಯಕ ಚತುರ್ಥಿ ಅಂಗವಾಗಿ ಎರಡು ದಿನ ಕಾರ್ಯಕ್ರಮ ನಡೆದಿತ್ತು, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ದೇವಳದ ಆಡಳಿತ ಧರ್ಮದರ್ಶಿ ಶ್ರೀ ರಮಣ ಉಪಾಧ್ಯಾಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು .ನಿರಂಜನ ಉಪಾಧ್ಯಾಯ ಹಾಗು ಶ್ರೀ ಪದ್ಮನಾಭ ಉಪಾಧ್ಯಾಯ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ, ಸಹ ಧರ್ಮದರ್ಶಿಗಳು,ಪರ್ಯಾಯ ಅರ್ಚಕ ವ್ಯಾಸ ಉಪಾಧ್ಯಾಯ ಸಹೋದರರು, ಕುಟುಂಬ ಸದಸ್ಯರು , ಆಡಳಿತ ಮಂಡಳಿ ನೌಕರರು , ಅರ್ಚಕ ಸಿಬ್ಬಂದಿ ಮತ್ತು ಊರವರ ಸಹಕಾರ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.

 

 

Related Articles

Back to top button