37 ವರ್ಷಗಳ ನಂತರ ಸ್ಟಾರ್ ನಟ ಗೋವಿಂದ ದಾಂಪತ್ಯ ಜೀವನ ಅಂತ್ಯ!

Views: 246
ಕನ್ನಡ ಕರಾವಳಿ ಸುದ್ದಿ: ಬಾಲಿವುಡ್ ಹಿರಿಯ ಸ್ಟಾರ್ ನಟ ಗೋವಿಂದ ಡಿವೋರ್ಸ್ ಪಡೆಯಲು ಮುಂದಾಗಿರುವ ವಿಚಾರ ಎಲ್ಲೆಡೆ ವೈರಲ್ ಆಗಿದೆ.
ಬಾಲಿವುಡ್ ಸ್ಟಾರ್ ನಟ ಗೋವಿಂದ ಮತ್ತು ಸುನೀತಾ ಅಹುಜಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈ ಜೋಡಿ ವಿಚ್ಛೇದನ ಪಡೆಯಲು ಮುಂದಾಗಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ. 1987ರ ಮಾರ್ಚ್‌ನಲ್ಲಿ ಮದುವೆಯಾಗಿದ್ದ ಗೋವಿಂದ ಮತ್ತು ಸುನೀತಾ 37 ವರ್ಷದ ತುಂಬು ದಾಂಪತ್ಯ ಜೀವನ ಒಟ್ಟಿಗೆ ನಡೆಸಿದ್ದಾರೆ. ಇವರಿಗೆ ಟಿನಾ ಅಜುಜಾ ಮತ್ತು ಯಶವರ್ಧನ್ ಅಹುಜಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. 37 ವರ್ಷ ಸುನೀತಾ ಅಹುಜಾ ಜೊತೆ ಸಂಸಾರ ಮಾಡಿರುವ ಬಾಲಿವುಡ್ ನಟ ಗೋವಿಂದ ಇದೀಗ ಇಬ್ಬರು ಕೆಲವು ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈಗಾಗಲೇ ಪರಸ್ಪರ ನೋಟಿಸ್ ಕಳುಹಿಸಲಾಗಿದೆ ಎನ್ನಲಾಗಿದೆ.
ಕೆಲ ತಿಂಗಳ ಹಿಂದೆ ಸುನೀತಾ ಅಹುಜಾ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು. ನಾನು ಮತ್ತು ನನ್ನ ಮಕ್ಕಳು ಫ್ಲಾಟ್‌ನಲ್ಲಿ ವಾಸ ಮಾಡುತ್ತಿದ್ದೇವೆ. ಪತಿ ಗೋವಿಂದ ಬೇರೆಯಾಗಿ ಒಬ್ಬರೇ ನಮ್ಮದೇ ಇನ್ನೊಂದು ಬಂಗಲೆಯಲ್ಲಿ ವಾಸವಿದ್ದಾರೆ ಎಂದು ತಾವು ದೂರ ದೂರ ಇರುವುದಾಗಿ ಹೇಳಿಕೊಂಡಿದ್ದರು. ಇದರಿಂದ ಗೋವಿಂದ ಮತ್ತು ಸುನೀತಾ ಅಹುಜಾ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಸದ್ಯ 60 ವಯಸ್ಸು ದಾಟಿರುವ ನಟ ಗೋವಿಂದ ಈಗ ವಿಚ್ಛೇದನ ಪಡೆಯುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇವರಿಬ್ಬರ ದಾಂಪತ್ಯದಲ್ಲಿ ಹುಳಿ ಹಿಂಡಿರುವುದು ಮರಾಠಿ ಚಿತ್ರರಂಗದ 30ರ ಹರೆಯದ ನಟಿ ಎಂದು ಹೇಳಲಾಗುತ್ತದೆ. ಅಲ್ಲದೇ ಗೋವಿಂದ ಅವರ ಮರಾಠಿ ನಟಿಯೊಂದಿಗಿನ ಸಂಬಂಧ ವಿಚ್ಛೇದನ ಕಾರಣವಾಗಿದೆ ಎಂದು ವರದಿಯಾಗಿದೆ.