ಯುವಜನ

ನನಗೆ ಸಿಕ್ಕವಳು ಯಾರಿಗೂ ಸಿಗಬಾರದೆಂದು ಪ್ರಿಯಕರನ ಘೋರ ಕೃತ್ಯವೇನು?

Views: 387

ಕನ್ನಡ ಕರಾವಳಿ ಸುದ್ದಿ: ನನಗೆ ಸಿಕ್ಕವಳು ಯಾರಿಗೂ ಸಿಗಬಾರದೆಂದು ಹುಚ್ಚನಂತಾಗಿದ್ದ ಪ್ರಿಯತಮೆ ಸಿಕ್ಕಿದಾಗ ಪ್ರಿಯಕರನ ಘೋರ ಕೃತ್ಯ ಬಯಲಾಗಿದೆ.

ವಿವಾಹಿತ ಪ್ರಿಯತಮೆಯನ್ನು  ರೂಂಗೆ ಕರೆದು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಪ್ರಕರಣದ ತನಿಖೆ ನಡೆಸಿರುವ ಸುಬ್ರಮಣ್ಯಪುರ ಪೊಲೀಸರು ಹರಿಣಿ ದುರಂತ ಹೇಗಾಯ್ತು ಅನ್ನೋ ರೋಚಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

36 ವರ್ಷದ ಹರಿಣಿಯ ಪತಿ ದಾಸೇಗೌಡ. ಈ ದಂಪತಿ ಕೆಂಗೇರಿಯಲ್ಲಿ ವಾಸವಿದ್ದರು. ಕೆಲ ತಿಂಗಳ ಹಿಂದೆ ಕೆಂಗೇರಿ ಏರಿಯಾದಲ್ಲಿ ಜಾತ್ರೆ ಇತ್ತು. ಈ ಜಾತ್ರೆಗೆ ಟೆಕ್ಕಿ ಯಶಸ್ ಹೋಗಿದ್ದು, ಗೃಹಿಣಿ ಹರಿಣಿಗೆ ಪರಿಚಯವಾಗಿದ್ದ. ಜಾತ್ರೆಯಲ್ಲೇ ಹರಿಣಿ, ಯಶಸ್‌ ಇಬ್ಬರ ಫೋನ್ ನಂಬರ್ ಕೂಡ ಎಕ್ಸ್‌ಚೇಂಜ್ ಆಗಿತ್ತು.

ಜಾತ್ರೆಯಲ್ಲಿ ಪರಿಚಯವಾದ ಬಳಿಕ ವಿವಾಹಿತ ಮಹಿಳೆ ಹರಿಣಿ ಹಾಗೂ ಟೆಕ್ಕಿ ಯಶಸ್ ಮಧ್ಯೆ ಸ್ನೇಹ ಬೆಳೆದು, ಚಾಟಿಂಗ್, ಡೇಟಿಂಗ್ ಕೂಡ ಮಾಡಿದ್ರು. ಹಲವು ಬಾರಿ ಇದೇ ರೀತಿ ಭೇಟಿ ಮಾಡೋದು ಫೋನ್‌ನಲ್ಲಿ ಮಾತಾಡೋದು ನಡೆಯುತ್ತಿತ್ತು.

ಹಲವು ದಿನಗಳ ಬಳಿಕ ಹರಿಣಿ ಗಂಡ ದಾಸೇಗೌಡನಿಗೆ ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿತ್ತು. ಹರಿಣಿ ಫೋನ್‌ ಕಿತ್ತುಕೊಂಡಿದ್ದ ದಾಸೇಗೌಡ ಹೆಂಡತಿಯನ್ನು ಮನೆಯಲ್ಲೇ ಕೂಡಿ ಹಾಕಿದ್ದ.

ಕೆಲವು ತಿಂಗಳ ನಂತರ ಹೊರ ಬಂದಿದ್ದ ಹರಿಣಿ, ಮತ್ತೆ ತನ್ನ ಬಾಯ್ ಫ್ರೆಂಡ್ ಯಶಸ್ ಅನ್ನು ಸಂಪರ್ಕಿಸಿದ್ದಳು. ತಿಂಗಳುಗಳ ಕಾಲ ಪ್ರಿಯತಮೆ ಹರಿಣಿ ಸಂಪರ್ಕಕ್ಕೆ ಸಿಗದೆ ಯಶಸ್‌ ಹುಚ್ಚನಾಗಿದ್ದ.

ಹರಿಣಿ ದೂರಾಗಿದ್ದಕ್ಕೆ ಸಾಯಿಸಲು ನಿರ್ಧರಿಸಿದ್ದ ಯಶಸ್‌, ಮೊದಲೇ ಚಾಕು ಕೂಡ ಖರೀದಿಸಿ ಇಟ್ಟಿದ್ದ. ಯಾವಾಗ ಮತ್ತೆ ಹರಿಣಿ, ಯಶಸ್‌ ಅನ್ನು ಭೇಟಿ ಮಾಡ್ತಾಳೋ ಆಗ ಇಬ್ಬರು ಮಾತುಕತೆ ಮಾಡಿಕೊಂಡು ಓಯೋ ರೂಮ್‌ಗೆ ಹೋಗುತ್ತಾರೆ.

ಮತ್ತೆ ಹರಿಣಿ ಸಿಗುತ್ತಿದ್ದಂತೆ ಯಶಸ್ ರಾಯಲ್ಸ್ ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿದ್ದ. ಓಯೋ ರೂಂನಲ್ಲಿ ಹರಿಣಿ ಹಾಗೂ ಯಶಸ್ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ನಿರ್ಧಾರ ಮಾಡಿದ್ದ ಯಶಸ್, ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದಿದ್ದಾನೆ.

ಜೂನ್ 6ರಂದು ರೂಮ್‌ನಲ್ಲಿ ಕೊಲೆ ಮಾಡಿ ಸಾಫ್ಟ್‌ವೇರ್ ಇಂಜಿನಿಯರ್ ಯಶಸ್ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸುಬ್ರಮಣ್ಯಪುರ ಇನ್ಸ್‌ಪೆಕ್ಟರ್ ರಾಜು ಅಂಡ್ ಟೀಮ್, FSL ತಂಡವನ್ನು ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಿದ್ದರು.

ಜೂನ್ 8ರಂದು ಸುಬ್ರಮಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಯಶಸ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಯಶಸ್‌ ತಪ್ಪೊಪ್ಪಿಕೊಂಡಿದ್ದಾನೆ. ನನ್ನ ಜೊತೆ ಹರಿಣಿಗೆ ಅನೈತಿಕ ಸಂಬಂಧ ಇತ್ತು. ನನ್ನ ಅವೈಡ್ ಮಾಡ್ತಾ ಇದ್ದಳು. ಹೀಗಾಗಿ ಕೊಲೆ ಮಾಡಿರುವುದಾಗಿ ಆರೋಪಿ ಯಶಸ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

Related Articles

Back to top button