3 ನಿಮಿಷದ ಹಾಡಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ ಪಡೆದ ಕನ್ನಡದ ನಟಿ ಶ್ರೀಲೀಲಾ

Views: 149
ಕನ್ನಡ ಕರಾವಳಿ ಸುದ್ದಿ: ಕನ್ನಡದ ಸ್ಟಾರ್ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗ ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ತೆಲುಗಿನಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

ತನ್ನ 14ನೇ ವಯಸ್ಸಿಗೆ ನಟನೆಗೆ ಎಂಟ್ರಿ ಕೊಟ್ಟಿರುವ ನಟಿ ಕಿಸ್ ಸಿನಿಮಾದ ಮೂಲಕ ಸಖತ್ ಫೇಮಸ್ ಆದರು. ನಂತರದ ದಿನಗಳಲ್ಲಿ ಒಂದಾದ ಮೇಲೆ ಒಂದು ಸಿನಿಮಾಗಳನ್ನು ಮಾಡುತ್ತಾ ಹೋದರು.

ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ, ವಿಜಯ್ ದೇವರಕೊಂಡ ಇನ್ನೂ ಕೆಲವು ಸ್ಟಾರ್‌ಗಳೊಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದಾರೆ ಶ್ರೀಲೀಲಾ. ಅಷ್ಟೇ ಅಲ್ಲದೇ ಶ್ರೀಲೀಲಾ ಕೈಯಲ್ಲಿ ಈಗ ಹಲವು ಅವಕಾಶಗಳು ಇವೆ. ‘ಪುಷ್ಪ’ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್‌ನ ‘ರಾಬಿನ್ ಹುಡ್’ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಅಲ್ಲದೇ ಸ್ಟಾರ್ ನಟ ಪವನ್ ಕಲ್ಯಾಣ್ ಜೊತೆ ನಟಿಸುತ್ತಿರುವ ‘ಉಸ್ತಾದ್ ಭಗತ್ ಸಿಂಗ್’ ಚಿತ್ರೀಕರಣ ಮತ್ತೆ ಶುರುವಾಗಲಿದೆ.
ಈಗಂತೂ ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಅವರ ಲಕ್ ಬದಲಾಗಿದೆ. ಟಾಲಿವುಡ್ ಅಷ್ಟೇ ಅಲ್ಲದೇ ಬಾಲಿವುಡ್ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಪೆಲ್ಲಿ ಸಂದಡಿ ಚಿತ್ರದ ಯಶಸ್ಸಿನ ನಂತರ ಶ್ರೀಲಿಗೆ ತೆಲುಗು ಚಿತ್ರಗಳಲ್ಲಿ ಸಾಕಷ್ಟು ಆಫರ್‌ಗಳು ಬಂದವು. ಸದ್ಯ ಶ್ರೀಲೀಲಾ ಕೈಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಚಿತ್ರಗಳಿವೆ. ಪೆಲ್ಲಿ ಸಂದದಿ ನಂತರ ಧಮಾಕಾ ಚಿತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಸ್ಕಂದ, ಭಗವಂತ ಕೇಸರಿ, ಆದಿಕೇಶವ, ಅಸಾಧಾರಣ ಮನುಷ್ಯ, ಗುಂಟೂರು ಕರಂ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಗುಂಟೂರು ಕರಮ್ ಮತ್ತು ಭಗವಂತ ಕೇಸರಿ ಉತ್ತಮವಾಗಿ ನಟಿಸ ಸೈ ಎನಿಸಿಕೊಂಡರು. ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಪವನ್ ಕಲ್ಯಾಣ್ ಎದುರು ನಟಿಸಲಿದ್ದಾರೆ ಈ ಚೆಲುವೆ.

ಕನ್ನಡದ ನಟಿ ಶ್ರೀಲೀಲಾ ಪುಷ್ಪ 2 ದಿ ರೂಲ್ ಸಿನಿಮಾದಲ್ಲಿ ಮೂಡಿ ಬಂದ ಮೂರು ನಿಮಿಷದ ‘ಕಿಸ್ಸಿಕ್’ ಸಾಂಗ್ಗೆ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಹೌದು, ಇದೇ ವಿಚಾರ ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೇವಲ ಮೂರು ನಿಮಿಷದ ಹಾಡಿಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಾ ಅಂತ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಕನ್ನಡದ ನಟಿ ಬೇರೆ ಭಾಷೆಗಳಲ್ಲಿ ಅಷ್ಟರ ಮಟ್ಟಿಗೆ ಮಿಂಚುತ್ತಿರುವುದು ಅಭಿಮಾನಿಗಳಿಗೆ ಮತ್ತಷ್ಟೂ ಖುಷಿ ತಂದುಕೊಟ್ಟಿದೆ.






