ಸಾಂಸ್ಕೃತಿಕ

ಬಿಗ್‌ಬಾಸ್‌ ಮನೆಗೆ ಬಂದ ಚೈತ್ರಾ ಕುಂದಾಪುರ ಅಮ್ಮ, ತಂಗಿ.. ಅಮ್ಮನ ಅದೊಂದು ಮಾತಿಗೆ ಕಣ್ಣೀರಿಟ್ಟ ಚೈತ್ರಾ

Views: 242

ಕನ್ನಡ ಕರಾವಳಿ ಸುದ್ದಿ:  ಚೈತ್ರಾ ಕುಂದಾಪುರ ತಾಯಿ ಹಾಗೂ ತಂಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಇದೇ ಕ್ಷಣಕ್ಕಾಗಿ ಕಾಯುತ್ತಿದ್ದ ಚೈತ್ರಾ ಕುಂದಾಪುರ ಅಮ್ಮನನ್ನು ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.

ಅಲ್ಲದೇ ಬಿಗ್‌ಬಾಸ್‌ ಮನೆಗೆ ಬಂದ ತಂಗಿಯನ್ನು ನೋಡಿ ಫುಲ್ ಖುಷಿಯಾಗಿದ್ದಾರೆ ಚೈತ್ರಾ ಕುಂದಾಪುರ. ಇನ್ನೂ ಬಿಗ್‌ಬಾಸ್‌ ಮನೆಗೆ ಬರುತ್ತಿದ್ದಂತೆ ರಜತ್ಗೆ ಮಿನಿ ಫೈರ್ ಬ್ರ್ಯಾಂಡ್ ಶಾಕ್ ಕೊಟ್ಟಿದ್ದಾಳೆ. ಇಷ್ಟು ದಿನ ರಜತ್ ಚೈತ್ರಾ ಕುಂದಾಪುರ ನಮ್ಮ ಬಾಸ್, ಏನೇ ಜಗಳವಾದ್ರೂ ನಮ್ಮ ಬಾಸ್ ಅಂತಾನೇ ಇರುತ್ತಿದ್ದರು. ಅಷ್ಟೇ ಅಲ್ಲ ಕಿಚ್ಚನ ಪಂಚಾಯ್ತಿಯಲ್ಲೂ ನಮ್ಮ ಬಾಸ್ ಚೈತ್ರಾ ಕುಂದಾಪುರ ಅಂತ ರೇಗಿಸಿದ್ದರು ರಜತ್.

ಇದೀಗ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಚೈತ್ರಾ ಕುಂದಾಪುರ ತಂಗಿ ರಜತ್ಗೆ ನಿಮಗೆ ನನ್ನ ಅಕ್ಕ ಬಾಸ್, ನನಗೆ ನೀವು ಬಾಸ್ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

ಬಿಗ್‌ಬಾಸ್‌ ಸೀಸನ್ 11 ಶುರುವಾಗಿ ಇಂದಿಗೆ 95 ದಿನಗಳು ಕಳೆದಿವೆ. ಇಷ್ಟು ದಿನಗಳ ಕಾಲ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಿಗೆ ಈ ವಾರ ತುಂಬಾನೇ ಸ್ಪೆಷಲ್ ಆಗಿತ್ತು. ಏಕೆಂದರೆ ಈ ವಾರ ಬಿಗ್‌ಬಾಸ್‌ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟು ಮಕ್ಕಳಿಗೆ ಹೊಸ ಹುರುಪನ್ನು ತುಂಬಿದ್ದರು.

ಅದರಂತೆ ಮಂಗಳವಾರದ ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆಗೆ ಭವ್ಯಾ ಗೌಡ, ತ್ರಿವಿಕ್ರಮ್ ಹಾಗೂ ರಜತ್ ಕಿಶನ್ ಫ್ಯಾಮಿಲಿಯವರು ಬಂದಿದ್ದರು. ನಿನ್ನೆ ಬಿಗ್‌ಬಾಸ್‌ ಮನೆಗೆ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ಗೌತಮಿ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದರು. ಇಂದಿನ ಸಂಚಿಕೆಯಲ್ಲಿ ಬಿಗ್ ಮನೆಗೆ ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ಫ್ಯಾಮಿಲಿಯವರು ಎಂಟ್ರಿ ಕೊಟ್ಟಿದ್ದಾರೆ.

ಬಿಗ್‌ಬಾಸ್‌ ಮನಗೆ ಚೈತ್ರಾ ಕುಂದಾಪುರ ತಾಯಿ ಹಾಗೂ ತಂಗಿ ಎಂಟ್ರಿ ಕೊಟ್ಟ. ಅಮ್ಮನನ್ನು ನೋಡುತ್ತಿದ್ದಂತೆ ಚೈತ್ರಾ ಭಾವುಕರಾಗಿದ್ದಾರೆ. ಆದ್ರೆ ತಾಯಿ ಆಡಿದ ಅದೊಂದು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಚೈತ್ರಾ. ಹೌದು ಬಿಗ್‌ಬಾಸ್‌ ಮನೆಗೆ ಬಂದಿದ್ದ ಚೈತ್ರಾ ಕುಂದಾಪುರ ಸತತವಾಗಿ 4 ಬಾರಿ ಸ್ಪರ್ಧಿಗಳಿಂದ ಕಳಪೆ ಪಟ್ಟ ಸಿಕ್ಕಿತ್ತು. ಹೀಗಾಗಿ ಇದೇ ವಿಚಾರವಾಗಿ ಚೈತ್ರಾ ಅವರ ತಾಯಿ ಮಾತಾಡಿದ್ದಾರೆ. ನನ್ನ ಮಗಳಿಗೆ ಇಷ್ಟು ವಾರದಲ್ಲಿ ಕಳಪೆ ಕೊಟ್ಟಿದ್ಧೀರಾ, ಆದ್ರೆ ನಮ್ಮ ಮಗಳು ಯಾವತ್ತಿದ್ರೂ ನಮಗೆ ಉತ್ತಮನೇ ಅಂತ ಹೇಳುತ್ತಾ ಮೆಡಲ್ ಹಾಕಿದ್ದಾರೆ. ಇದಾದ ಬಳಿಕ ಮಾತಾಡಿದ ಚೈತ್ರಾ, ನನ್ನ ತಂಗಿ ಹುಟ್ಟಿದ್ದಾಗ ನಮಗೆ ನಿಜವಾದ ಚಾಲೆಂಜ್ ಶುರುವಾಗುತ್ತೆ, ಮೂರನೇದು ಹೆಣ್ಣಾಯ್ತು, ಅಪ್ಪ ಅಮ್ಮನ ಹೆಣಕ್ಕೆ ಬೆಂಕಿ ಇಡೋಕು ಇವರ ಮನೆಯಲ್ಲಿ ಗಂಡು ದಿಕ್ಕಿಲ್ಲ ಅಂತ ಜನ ಹೇಳಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

Related Articles

Back to top button