ಇತರೆ

11 ತಿಂಗಳ ಹಸುಗೂಸು, 4 ವರ್ಷದ ಹೆಣ್ಣು ಮಗುವಿನ ಜೊತೆ ತಾಯಿಯು ಕೆರೆಗೆ ಹಾರಿ ಅತ್ಮಹತ್ಯೆ, ಡೆತ್‌ನೋಟ್‌ನಲ್ಲಿ ಏನಿದೆ.?

Views: 0

ತುಮಕೂರು:ನಿಟ್ಟೂರು ಗ್ರಾಮದ ವಿಜಯಲಕ್ಷ್ಮಿ ಎನ್ನುವರು ತನ್ನ 11 ತಿಂಗಳ ಮಗು ಯದು ನಾಯಕ್ ಹಾಗೂ 4 ವರ್ಷದ ಹೆಣ್ಣು ಮಗುವಿನ ಜೊತೆ ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರೆಲ್ಲ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಕೆರೆಯಿಂದ ಮೂವರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಹಿಂದಿನ ರಹಸ್ಯ ಭೇದಿಸಲು ಮುಂದಾಗಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ.?

ವಿಜಯಲಕ್ಷ್ಮಿ ಅವರು ನನ್ನ ಸಾವಿಗೆ ನಾನೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿದ್ದಾರೆ. ಒಂದು ವರ್ಷದ ಹಿಂದೆ ಪತಿ‌ ನವೀನ್ ಅನಾರೋಗ್ಯದಿಂದ‌ ಸಾವನ್ನಪ್ಪಿದ್ದ. ಈಗ 11 ತಿಂಗಳ ಮಗುವಿಗೂ ಶ್ವಾಸಕೋಶದ ಸಂಬಂಧಿ ಕಾಯಿಲೆ ಇದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ವಾಸಿಯಾಗಿರಲಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶರಣಾಗುತ್ತಿದ್ದೇನೆ ಎಂದು ವಿಜಯಲಕ್ಷ್ಮಿ ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

Related Articles

Back to top button
error: Content is protected !!