ಹೆಂಡತಿಯನ್ನು ಕೊಲೆ ಮಾಡಿ ಸೂಟ್ ಕೇಸ್‌ನಲ್ಲಿ ತುಂಬಿ ಎಸ್ಕೇಪ್ ಆಗಿದ್ದ ಪತಿ ಪುಣೆಯಲ್ಲಿ ಅರೆಸ್ಟ್

Views: 66
ಕನ್ನಡ ಕರಾವಳಿ ಸುದ್ದಿ: ಹೆಂಡತಿಯನ್ನು ಕೊಲೆ ಮಾಡಿ ಸೂಟ್ ಕೇಸ್‌ನಲ್ಲಿ ತುಂಬಿ ಎಸ್ಕೆಪ್ ಆಗಿದ್ದ ಆರೋಪಿ ರಾಕೇಶ್‌ನನ್ನು ಬೆಂಗಳೂರಿನ ಹುಳಿಮಾವು ಪೊಲೀಸ್ರು ನೀಡಿದ ಮಾಹಿತಿ ಮೇರೆಗೆ ಪುಣೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಳಿಮಾವು ಠಾಣೆ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯ ವಾಲ್ ಮಾರ್ಕ್ ಅಪಾರ್ಟೆಂಟ್ ಮುಂಭಾಗ ಈ ಘಟನೆ ಬೆಳಿಕಿಗೆ ಬಂದಿತ್ತು. ನಿನ್ನೆ ಮಧ್ಯಾಹ್ನ ಪತ್ನಿ ಗೌರಿಯನ್ನ ಹತ್ಯೆ ಮಾಡಿ ನಂತರ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ನಲ್ಲಿ ತುಂಬಿ ಎಸ್ಕೆಪ್ ಆಗಿದ್ದ. ಅಕ್ಕಪಕ್ಕದವರಿಗೆ ವಾಸನೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸೂಟ್ ಕೇಸ್ ಓಪನ್ ಮಾಡಿ ನೋಡಿದಾಗ ಗೌರಿ ಕತ್ತನ್ನ ಅರ್ಧ ಕೊಯ್ದು ಸೂಟ್ ಕೇಸ್‌ಗೆ ತುಂಬಿರೋದು ಬೆಳಕಿಗೆ ಬಂದಿದೆ.
ಕೊಲೆ ಮಾಡಿ ನಿನ್ನೆ ರಾತ್ರಿ 12.30ಕ್ಕೆ ರಸ್ತೆಯಲ್ಲಿ ಒಬ್ಬನೆ ನಡೆದುಕೊಂಡು ಹೋಗಿ ಅಪಾರ್ಟ್ ಮೆಂಟ್ ಒಂದರ ಬಳಿ ನಿಲ್ಲಿಸಿದ್ದ ಕಾರು ತೆಗೆದುಕೊಂಡು ರಾಕೇಶ್ ಎಸ್ಕೆಪ್ ಆಗಿದ್ದ. ರಾಕೇಶ್‌ಗೆ ಕೆಳಗಿನ ಮನೆಯವರು ಕಾಲ್ ಮಾಡಿದಾಗ ನನ್ನ ಹೆಂಡ್ತಿ ಕೊಲೆ ಮಾಡಿ ಸೂಟ್ ಕೇಸ್ ಗೆ ತುಂಬಿರೋದಾಗಿ ಹೇಳಿದ್ದಂತೆ.