ಸಾಮಾಜಿಕ

ಹಿರಿಯ ಅಧಿಕಾರಿಗಳಿಂದ ಒತ್ತಡ ಸಮೀಕ್ಷೆ ವೇಳೆ ಶಿಕ್ಷಕ ಸಾವು

Views: 330

ಕನ್ನಡ ಕರಾವಳಿ ಸುದ್ದಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿದ್ದ ಶಿಕ್ಷಕ ವೈ.ವಿ. ರಾಮಕೃಷ್ಣ (58) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ನಿವೃತ್ತಿ ಅಂಚಿನಲ್ಲಿದ್ದರು. ಮೊಬೈಲ್ ಬಳಕೆಯೂ ಸರಿ ಯಾಗಿ ಬರುತ್ತಿರಲಿಲ್ಲ. ಹೀಗಾಗಿ ಸಮೀಕ್ಷಾ ಕಾರ್ಯ ತುಂಬಾ ನಿಧಾನಗತಿಯಲ್ಲಿ ಮಾಡುತ್ತಿದ್ದರು. ನಿತ್ಯದ ಸಮೀಕ್ಷಾ ಸಾಧನೆ ಕಡಿಮೆಯಾಗಿತ್ತು. ನೋಟಿಸ್ ಕೊಡುವುದಾಗಿ ಹಿರಿಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದರು. ಸಮೀಕ್ಷೆಯಲ್ಲಿ ನಿಗದಿತ ಗುರಿ ಸಾಧಿಸದಿದ್ದರೆ ಶಿಸ್ತಿನ ಕ್ರಮಕೈಗೊಳ್ಳಲಾಗುವುದು ಎಂಬ ಸುತ್ತೋಲೆಯಿಂದ ಆತಂಕ, ಗಾಬರಿಗೆ ಒಳಗಾಗಿದ್ದರು. ಈ ಆತಂಕದಿಂದ ಅವರಿಗೆ ಹೃದಯಾಘಾತ ವಾಗಿದೆ ಎಂದು ಶಿಕ್ಷಕರ ಸಂಘಟನೆಗಳು ಆರೋಪಿಸಿವೆ. ರಾಮಕೃಷ್ಣ ತಾಲೂಕಿನ ಯಗವಕೋಟೆ ಕ್ಲಸ್ಟರ್‌ವ್ಯಾಪ್ತಿಯ ದಿಗವಕೋಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಭಾನುವಾರ ಮಧ್ಯಾಹ್ನ 3ರವರೆಗೂ ಮತ್ತೊಬ್ಬ ಶಿಕ್ಷಕರ ನೆರವಿನಿಂದ ಸಮೀಕ್ಷೆ ನಡೆಸಿದ್ದರು.

ನಂತರ ಒಬ್ಬರೇ ಸಮೀಕ್ಷೆ ಕಾರ್ಯ ನಡೆಸಿದ್ದರು. ಒತ್ತಡ ಹೆಚ್ಚಾಗಿ ಕೆಲಸ ಮಾಡಲು ಸಾಧ್ಯವಾಗದೆ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರೇ ನಗರದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸು ವಷ್ಟರಲ್ಲೇ ಉಸಿರೆಳೆದಿದ್ದಾರೆ.

Related Articles

Back to top button