ಸಾಂಸ್ಕೃತಿಕ

ಸ್ಫೋಟಿಸಿದ ಪ್ರಕರಣಕ್ಕೆ ಬಿಗ್‌ಬಾಸ್‌ ಖ್ಯಾತಿಯ ಡ್ರೋನ್ ಪ್ರತಾಪ್ ಬಂಧನ

Views: 202

ತುಮಕೂರು: ಕೃಷಿ ಹೊಂಡದಲ್ಲಿ ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೃಷಿ ಹೊಂಡದಲ್ಲಿ ಸೋಡಿಯಂ ಹಾಕಿ, ಡ್ರೋಣ್ ಪ್ರತಾಪ್ ಸ್ಫೋಟಿಸಿದ್ದರು. ಹಾಗು, ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಈ ಕುರಿತು ತುಮಕೂರಿನ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮಿಡಿಗೇಶಿ ಠಾಣೆ ಪೊಲೀಸರು ಪ್ರತಾಪ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ? ಡ್ರೋನ್ ಪ್ರತಾಪ್ ಇತ್ತೀಚೆಗೆ ನೀರಿನಲ್ಲಿ ಬ್ಲಾಸ್ಟ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಸೋಡಿಯಂ ತುಂಬಿದ್ದ ಕವರ್ ಅನ್ನು ಕೃಷಿ ಹೊಂಡಕ್ಕೆ ಎಸೆದ ತಕ್ಷಣ ಸ್ಫೋಟವಾಗಿದೆ. ಬೆಂಕಿ ದೊಡ್ಡ ಮಟ್ಟದಲ್ಲಿ ಚಿಮ್ಮಿದೆ. ಸಿನಿಮಾಗಳಲ್ಲಿ ಬ್ಲಾಸ್ಟ್ ಆದ ದೃಶ್ಯಗಳಂತೆಯೇ ಇತ್ತು. ಬ್ಲಾಸ್ಟ್ ಆದ ತಕ್ಷಣವೇ ಜೋರಾಗಿ ಕಿರುಚುತ್ತಾ ತುಂಬಾ ಖುಷಿಪಟ್ಟಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.

ಬ್ಲಾಸ್ಟ್ ಮಾಡಿದ್ದರ ವಿರುದ್ಧ ಕಿಡಿಕಾರಿದ ಪರಿಸರವಾದಿಗಳು, ಕ್ರಮಕ್ಕೆ ಆಗ್ರಹಿಸಿದ್ದರು. ಮುಂದಿನ ದಿನಗಳಲ್ಲಿ ಈತ ಜನಗಳ ಮೇಲೆ ಪ್ರಯೋಗ ಮಾಡಿದರೂ ಅಚ್ಚರಿ ಇಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು. ಈ ರೀತಿ ವಿಡಿಯೋ ಹಂಚಿಕೆ ಮಾಡಿಕೊಳ್ಳುವ ಮೂಲಕ ಕಿಡಿಗೇಡಿಗಳು ವಿವಿಧ ಕೃತ್ಯಗಳಿಗೆ ಬಳಸುವ ಸಾಧ್ಯತೆ ಇದೆ ಎಂದು ಪರಿಸರವಾದಿ ವಿಜಯ್ ನಿಶಾಂತ್ ಆಕ್ರೋಶ ವ್ಯಕ್ತಪಡಿಸಿದ್ದರು. ಅದರಂತೆ, ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸೆಕ್ಷನ್ 288, ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

Related Articles

Back to top button
error: Content is protected !!