ಸ್ನೇಹಿತೆಯೊಂದಿಗೆ ಪ್ರಿಯಕರ: ಮನನೊಂದು ಮಹಿಳೆ ಆತ್ಮಹತ್ಯೆ

Views: 238
ಕನ್ನಡ ಕರಾವಳಿ ಸುದ್ದಿ: ಪ್ರಿಯತಮ ಬೇರೊಂದು ಮಹಿಳೆಯೊಟ್ಟಿಗೆ ಲಾಡ್ಜ್‌ನಲ್ಲಿರುವುದನ್ನು ಕಂಡು ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಶೋಧ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮುನ್ನ ತನ್ನ ಪ್ರಿಯತಮ ಬೇರೊಂದು ಮಹಿಳೆಯೊಂದಿಗೆ ಇದ್ದ ಓಯೋ ರೂಂ ಮೇಲೆ ದಾಳಿ ಮಾಡಿ ಗಲಾಟೆ ಮಾಡಿದ್ದಳು. ಗಲಾಟೆಗೆ ಪ್ರಿಯತಮ ವಿಶ್ವನಾಥ್ ಸರಿಯಾಗಿ ರೆಸ್ಪಾನ್ಸ್ ಮಾಡದಿದ್ದಾಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆತ್ಮಹತ್ಯೆಗೆ ಶರಣಾದ ಯಶೋಧಗೆ ಗಂಡ ಇದ್ದು ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ, ಆಕೆ ಪಕ್ಕದ ಏರಿಯಾದ ಮನೆಯಲ್ಲಿ ಆಡಿಟರ್ ಆಗಿದ್ದ ವಿಶ್ವನಾಥ್ ಎಂಬಾತನೊಂದಿಗೆ ಕಳೆದ 9 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಳು. ಆದರೆ, ಇತ್ತೀಚೆಗೆ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು ಪ್ರಿಯಕರನಿಗೆ ಪರಿಚಯಿಸಿದ್ದರು.
ಪ್ರಿಯಕರ ಯಶೋಧ ಸ್ನೇಹಿತೆ ಜೊತೆ ಸಲುಗೆ ಬೆಳೆಸಿ ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಅಲ್ಲದೇ, ಆಕೆಯನ್ನು ಓಯೋ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಈ ವಿಚಾರ ಯಶೋಧ ಕಿವಿಗೆ ಬಿದ್ದಿದೆ.
ಪ್ರಿಯಕರ ಸ್ನೇಹಿತೆಯೊಟ್ಟಿಗೆ ಇರುವ ಲಾಡ್ಜ್‌ಗೆ ಹೋಗಿ ಗಲಾಟೆ ಮಾಡಿದ್ದಾಳೆ. ಆಗ ಪ್ರಿಯಕರ ಸರಿಯಾಗಿ ಸ್ಪಂದಿಸದೇ ಇದ್ದಾಗ, ಮನನೊಂದು ಅಲ್ಲೇ ಪಕ್ಕದ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.