ಸೆ.14ರಂದು ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ
ಅಶೋಕ್ ಕುಮಾರ್ ಕೊಡ್ಯಡ್ಕಗೆ 'ಪದ್ಮ ಕಲಾ ತಪಸ್ವಿ' ಬಿರುದು ಹಾಗೂ ಮಂಜುನಾಥ್ ಶೆಟ್ಟಿಗಾರ್‌ಗೆ 'ಪದ್ಮ ಪ್ರತಿಭಾ' ಪುರಸ್ಕಾರ

Views: 219
ಕನ್ನಡ ಕರಾವಳಿ ಸುದ್ದಿ, ಉಡುಪಿ :ಪದ್ಮ ಶಾಲಿ ಸಮಾಜ ಸೇವಾ ಸಂಘದ 89ನೇ ವಾರ್ಷಿಕ ಮಹಾಸಭೆ ಹಾಗೂ ದ. ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿಯ 50ನೇ ವಾರ್ಷಿಕ ಮಹಾಸಭೆ ಹಾಗೂ ಬಹುಮಾನ ವಿತರಣೆ ಮತ್ತು ಪದ್ಮಶಾಲಿ ಮಹಿಳಾ ಬಳಗದ 37ನೇ ವಾರ್ಷಿಕ ಮಹಾಸಭೆಯು ಸೆ. 14ರ ಆದಿತ್ಯವಾರದಂದು ಮುಂಜಾನೆ 9:00ಕ್ಕೆ ಮಹಾರಾಷ್ಟ್ರ ಸೇವಾ ಸಂಘ ಹಾಲ್, ಮುಲುಂಡ್ ಪಶ್ಚಿಮ, ಇದರಲ್ಲಿ ಸಂಘದ ಅಧ್ಯಕ್ಷ ಉತ್ತಮ್ ಎ. ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಹಾಗು ಸೊಸ್ಕಾಟಿಯ ಸಭಾಪತಿಯವರಾದ ಬಿ. ರಾಮಚಂದ್ರ ಶೆಟ್ಟಿಗಾರ್ ಅವರ ಸಭಾಪತಿತ್ವದಲ್ಲಿ ಜರಗಲಿರುವುದು.
ಮಹಾಸಭೆಯ ಮೊದಲು ಮಹಿಳೆಯರಿಗೆ ಹಳದಿ-ಕುಂಕುಮ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ಯಾಮ್ ಎನ್. ಶೆಟ್ಟಿ ಮಂಜುನಾಥ್ ಶೆಟ್ಟಿಗಾರ ಆಶೋಕ್ ಕೊಡ್ಕಡ್ಕ ಶಾಲೆ, ಕಾಲೇಜು ಮತ್ತು ಇತರ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಗಳನ್ನು ಏರ್ಪಡಿಸಲಾಗಿದೆ. ಚಲನಚಿತ್ರ ಮತ್ತು ನಾಟಕದ ಮೇಕಪ್ ಕಲಾವಿದ ಶ್ರೀ ಮಂಜುನಾಥ್ ಶೆಟ್ಟಿಗಾರರಿಗೆ ‘ಪದ್ಮ ಪ್ರತಿಭಾ -2025’ ಪುರಸ್ಕಾರ ನೀಡಲಾಗುವುದು. ನಾಟ್ಯ ನಿರ್ದೇಶಕ, ನಟ, ರಂಗ ಸಜ್ಜಿಕೆ ಮತ್ತು ಮರದ ಕರಕುಶಲ ಕಲಾವಿದರಾದ ಅಶೋಕ್ ಕುಮಾರ್ ಕೊಡ್ಕಡ್ಕರಿಗೆ ‘ಪದ್ಮ ಕಲಾ ತಪಸ್ವಿ’ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ಗೌರವ ಅತಿಥಿಯಾಗಿ ಯಶಸ್ವಿ ಹೋಟೆಲ್ ಉದ್ಯಮಿ ಹಾಗೂ ಸಮಾಜ ಸೇವಕ ಶ್ಯಾಮ್ ಎನ್. ಶೆಟ್ಟಿ ಆಗಮಿಸಲಿದ್ದಾರೆ. ಕ್ವಿಜ್ ಮಾಸ್ಟರ್ ಧನಂಜಯ್ ಜಿ. ಶೆಟ್ಟಿಗಾರರಿಂದ ರಸ ಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಪ್ರೀತಿ ಭೋಜನದ ನಂತರ 2:00 ಗಂಟೆಗೆ ವಾರ್ಷಿಕ ಮಹಾಸಭೆ ಜರಗಲಿದೆ. ತದನಂತರ ಮಧ್ಯಾಹ್ನ 3:30 ಗಂಟೆಗೆ ಅಶೋಕ್ ಕುಮಾರ್ ಕೊಡ್ಕ ನಿರ್ದೇಶಿಸಿದ ತುಳು ಹಾಸ್ಯ ನಾಟಕ ‘ಕಮ್ಮನ ಕ್ಯಾಟರರ್ಸ್ ಪ್ರದರ್ಶಿಸಲಾಗುವುದು. 5:30 ಗಂಟೆಯಿಂದ ಮಹಿಳಾ ಬಳಗ ಮತ್ತು ಯುವ ಸಮಿತಿಯವರಿಂದ ಆಯೋಜಿಸಲ್ಪಟ್ಟ ಮನೋರಂಜನಾ ಹಾಗೂ ನೃತ್ಯ ಕಾರ್ಯಕ್ರಮ ಪ್ರಸ್ತುತವಾಗಲಿದೆ.
ಎಲ್ಲಾ ಕಾರ್ಯಕ್ರಮಗಳು ಕ್ಲಪ್ತ ಸಮಯದಲ್ಲಿ ಆರಂಭಗೊಳ್ಳಲಿದ್ದು ಎಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷರು, ಸೊಸೈಟಿಯ ಸಭಾಪತಿ, ಕಲಾ ಭವನದ ಕಾರ್ಯಾಧ್ಯಕ್ಷ ಕೃಷ್ಣಾನಂದ ಶೆಟ್ಟಿಗಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಶೆಟ್ಟಿಗಾರ್, ಯುವ ಸಮಿತಿಯ ಕಾರ್ಯಾಧ್ಯಕ್ಷ ಜಯೇಶ್ ಶೆಟ್ಟಿಗಾರ್, ಭಜನೆ ಸಮಿತಿಯ ಸಂಚಾಲಕ ಕರುಣಾಕರ್ ಕನ್ನರ್ಪಾಡಿ ಹಾಗೂ ಎಲ್ಲಾ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ