ಸೆಪ್ಟೆಂಬರ್ 22 ರಿಂದ ನಡೆಯುತ್ತಾ ಜಾತಿ ಗಣತಿ ಸಮೀಕ್ಷೆ ? ಸಚಿವರಲ್ಲಿಯೇ ಗೊಂದಲ, ಭಿನ್ನಮತ!

Views: 27
ಕನ್ನಡ ಕರಾವಳಿ ಸುದ್ದಿ: ರಾಜ್ಯ ರಾಜಕಾರಣದಲ್ಲಿ ಜಾತಿ ಜನಗಣತಿ ಲೆಕ್ಕಾಚಾರ ಭಾರೀ ಕುತೂಹಲ ಮೂಡಿಸಿದೆ. ಜಾತಿ ಜನಗಣತಿ ಜೇನುಗೂಡಿಗೆ ಮತ್ತೆ ಕೈ ಹಾಕಿರೋ ಸಿಎಂ ಸಿದ್ದರಾಮಯ್ಯ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಿಂದೂ ಮೂಲ ಜಾತಿಗಳ ಜೊತೆಯಲ್ಲೇ ಕ್ರಿಶ್ಚಿಯನ್ ಹೆಸರು ಸೇರಿಸಿರುವುದು ಸ್ವಪಕ್ಷದ ಸಚಿವರ ಆಕ್ರೋಶಕ್ಕೂ ಕಾರಣವಾಗಿತ್ತು.
ರಾಜ್ಯ ರಾಜಕಾರಣದಲ್ಲಿ ಜಾತಿ ಜನಗಣತಿ ಲೆಕ್ಕಾಚಾರ ಭಾರೀ ಕುತೂಹಲ ಮೂಡಿಸಿದೆ. ಜಾತಿ ಜನಗಣತಿ ಜೇನುಗೂಡಿಗೆ ಮತ್ತೆ ಕೈ ಹಾಕಿರೋ ಸಿಎಂ ಸಿದ್ದರಾಮಯ್ಯ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಿಂದೂ ಮೂಲ ಜಾತಿಗಳ ಜೊತೆಯಲ್ಲೇ ಕ್ರಿಶ್ಚಿಯನ್ ಹೆಸರು ಸೇರಿಸಿರುವುದು ಸ್ವಪಕ್ಷದ ಸಚಿವರ ಆಕ್ರೋಶಕ್ಕೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸೆಪ್ಟಂಬರ್ 22 ಅಂದ್ರೆ.. ಮುಂದಿನ ಸೋಮವಾರದಿಂದ ಆರಂಭವಾಗಬೇಕಿದ್ದ ಜಾತಿ ಗಣತಿ ಮರು ಸರ್ವೇ ಮುಂದೂಡಿಕೆ ಆಗುವ ಲಕ್ಷಣ ಗೋಚರಿಸಿದೆ.
ದಸರಾ ಹೊತ್ತಲ್ಲೇ ರಾಜ್ಯದಲ್ಲಿ ಹೊತ್ತಿರುವ ಜಾತಿ ಕಿಡಿ ಧಗಧಗಿಸ್ತಿದ್ದು, ಸರ್ಕಾರಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕ್ಯಾಬಿನೆಟ್ ಸಭೆಯಲ್ಲೂ ಜಾತಿ ಜಟಾಪಟಿ ಜೋರಾಗಿತ್ತು. ಕೆಲ ಸಚಿವರು ಸಿಎಂ ಸಿದ್ದರಾಮಯ್ಯ ಎದುರೇ ಏರು ಧ್ವನಿಯಲ್ಲೇ ಜಾತಿ ಗಣತಿ ಮರು ಸರ್ವೆ ಬಗ್ಗೆ ಅಪಸ್ವರ ಮೂಡಿ ಬಂದಿದೆ.
ಒಟ್ಟಾರೆ ಸಂಪುಟ ಸಭೆ ಬಳಿಕ… ಸಚಿವ ವಿಶೇಷ ಸಭೆಯಲ್ಲೂ ಜಾತಿಗಣತಿ ಸರ್ವೇಗೆ ಅಪಸ್ವರ ಕೇಳಿ ಬಂದಿದ್ದು. ಸಮೀಕ್ಷೆ ಮುಂದೂಡಿಕೆ ಒತ್ತಾಯಿಸಿದ್ರು.. ಇದೀಗ ಜಾತಿ ಗಣತಿ ಮರು ಸರ್ವೆ ಚೆಂಡು ಸಿಎಂ ಅಂಗಳ ತಲುಪಿದ್ದು, ನಿಗದಿಯಂತೆ ಸಮೀಕ್ಷೆ ಶುರುವಾಗುತ್ತಾ.. ಇಲ್ಲ ಮುಂದೂಡಿಕೆ ಆಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.