ಶಿಕ್ಷಣ
ಸಿದ್ದಾಪುರ ಜ್ಞಾನ ಸರಸ್ವತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕೆಎಂಎಫ್ ಘಟಕಗಳಿಗೆ ಶೈಕ್ಷಣಿಕ ಪ್ರವಾಸ
Views: 498
ಕನ್ನಡ ಕರಾವಳಿ ಸುದ್ದಿ: ಸಿದ್ದಾಪುರ ಜ್ಞಾನ ಸರಸ್ವತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಉಡುಪಿ ಕೆಎಂಎಫ್ ಹಾಗೂ ಕುಲಶೇಖರ, ಮಂಗಳೂರು ಕೆಎಂಎಫ್ ಘಟಕಗಳಿಗೆ ಔದ್ಯಮಿಕ ಪ್ರವಾಸದ ನಿಟ್ಟಿನಲ್ಲಿ ಭೇಟಿ ನೀಡಿದರು.
ಭೇಟಿಯ ವೇಳೆ ಹಾಲು ಸಂಗ್ರಹಣೆ, ಸಂಸ್ಕರಣೆ, ಹಾಲು ಹಾಗೂ ಹಾಲಿನ ಇತರ ಉತ್ಪನ್ನಗಳ ಪ್ಯಾಕೇಜಿಂಗ್, ಶೀತಲೀಕರಣ ಹಾಗೂ ಗುಣಮಟ್ಟ ನಿಯಂತ್ರಣದ ವಿವಿಧ ಹಂತಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಆಧುನಿಕ ಯಂತ್ರೋಪಕರಣಗಳ ಕಾರ್ಯವಿಧಾನವನ್ನು ನೇರವಾಗಿ ವೀಕ್ಷಿಸಿದ ವಿದ್ಯಾರ್ಥಿಗಳು ಕೈಗಾರಿಕಾ ಕಾರ್ಯಾಚರಣೆಯ ಪ್ರಾಯೋಗಿಕ ಅರಿವು ಪಡೆದರು.
ವಿದ್ಯಾರ್ಥಿಗಳ ವೃತ್ತಿ ಅರಿವಿಗೆ ಪೂರಕವಾದ ಈ ಔದ್ಯಮಿಕ ಭೇಟಿ ಫಲಪ್ರದವಾಗಿ ನೆರವೇರಿತು. ಕಾಲೇಜಿನ ಉಪನ್ಯಾಸಕ ವೃಂದದವರು ಈ ಪ್ರವಾಸದಲ್ಲಿ ಮಕ್ಕಳ ಜೊತೆಗಿದ್ದು ಸಹಕರಿಸಿದರು.







