ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ದಾಳಿ 10 ಕೋಟಿ ಡ್ರಗ್ಸ್ ವಶ

Views: 0
ಬೆಂಗಳೂರು:ಅಡುಗೆ ಮಾಡುವ ಪ್ರೆಸರ್ ಕುಕ್ಕರ್ ನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ದಾಳಿ ಮಾಡಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು 10 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ರಾಮಮೂರ್ತಿನಗರದ ಬಳಿ ಅಡುಗೆ ಮಾಡುವ ಪ್ರೆಜರ್ ಕುಕ್ಕರ್ ನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ದಾಳಿ ನಡೆಸಿ

ವಿದೇಶಿ ಪ್ರಜೆಯನ್ನು ಬಂಧಿಸಿ ಮನೋಪರಿಣಾಮಕ ಎಂಡಿಎಂಎ ಕ್ರಿಸ್ಟೆಲ್ ತಯಾರಿಸಿ ನಗರವಲ್ಲದೇ ರಾಜ್ಯ ಹಾಗೂ ದೇಶ-ವಿದೇಶಗಳ ಗಿರಾಕಿಗಳು ಸಬ್ಪೆಡ್ಲರ್ ಗಳಿಗೆ ಸರಬರಾಜು ಮಾಡಿ ಮಾರಾಟ ಮಾಡುತ್ತಿರುವುದನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ನೈಜೀರಿಯಾ ಪ್ರಜೆ ಬೆಂಜಮಿನ್ ಅಲಿಯಾಸ್ ಚಿಡು ಬೆಮು(40) ನಿಂದ ಎಂಡಿಎಂಎ ತಯಾರು ಮಾಡುತ್ತಿದ್ದ ಹೈಡ್ರಾಲಿಕ್ ಆಸಿಡ್, ರಾಸಾಯನಿಕ ಮತ್ತು ರಾಸಾಯನಿಕ ಆಮ್ಲ (ಕೆಮಿಕಲ್ಸ್ ಗಳು) ಇತರೆ ಕಚ್ಚಾವಸ್ತುಗಳು,ಗ್ಯಾಸ್ ಸ್ಟೌವ್ ಗಳು,ಮೊಬೈಲ್ ,ತೂಕದ ಯಂತ್ರ ಕುಕ್ಕರ್ ಸೇರಿ 10 ಕೋಟಿ ಮೌಲ್ಯದ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ವ್ಯಾಪಾರಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಬಂಧಿತ ಆರೋಪಿಯು ರಾಮಮೂರ್ತಿ ನಗರ ಮತ್ತು ಅವಲಹಳ್ಳಿಯಲ್ಲಿ ವಾಸವಿದ್ದ. 2021 ರಿಂದ ನಗರದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಆತನ ವೀಸಾ ಅವಧಿ 2022ರಲ್ಲಿ ಮುಗಿದಿದೆ. ಆದರೆ ಯಾವಾಗ ಡ್ರಗ್ಸ್ ಗಳನ್ನು ತಯಾರು ಮಾಡಲು ಶುರುಮಾಡಿದ್ದ ಎನ್ನುವುದು ಗೊತ್ತಾಗಿದೆ.
ದೆಹಲಿ ಹಾಗೂ ಬೇರೆ ಬೇರೆ ಕಡೆಯಿಂದ ತರಿಸಿ ಸಬ್ ಪೆಡರ್ಸ್ ಗಳಿಗೆ ಮಾರಾಟ ಮಾಡುತ್ತಿದ್ದ. ಅಲ್ಲದೇ ಈತ ಬಟ್ಟೆ ಮೆಟೀರಿಯಲ್ಸ್ ಮಾರಾಟ ಮಾಡುತ್ತೇನೆ ಎಂದು ಮನೆ ಬಾಡಿಕೆ ಪಡೆದಿದ್ದ. ಈ ಹಿಂದೆ ಈತ ಹೈದ್ರಾಬಾದ್ ನಲ್ಲಿ ಬಂಧಿತನಾಗಿದ್ದ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಿಸಿಬಿ ಅಧಿಕಾರಿಗಳು ಡ್ರಗ್ಸ್ ವಿರುದ್ದ ಸಮರ ಮುಂದುವರೆಸಿದ್ದು ಎಲ್ಲಾ ಆಯಾಮಗಳಲ್ಲಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ ಎಂದು ಹೇಳಿದರು. ವಿಚಾರಣೆ ವೇಳೆ ಮೊದಲಿಗೆ ಅರೋಪಿ ಬಳಿ 100 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು,ಬಳಿಕ ಆರೋಪಿ ವಿಚಾರಣೆಯನ್ನು ತೀವ್ರಗೊಳಿಸಿದ ಬಳಿಕ ಎಂಡಿಎಂಎ ಕ್ರಿಸ್ಟಲ್ ತಯಾರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಡಿಸಿಪಿ ಶ್ರೀನಿವಾಸ ಗೌಡ ಎಸಿಪಿ ಕುಮಾರ್, ಇನ್ಸ್ಪೆಕ್ಟರ್ ಭರತ್ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದರು.






