ಜನಮನ

ಸಾಸ್ತಾನ-ಗುಂಡ್ಮಿ: ಸಾವಿನಲ್ಲೂ ಒಂದಾದ ದಂಪತಿ

Views: 259

ಕನ್ನಡ ಕರಾವಳಿ ಸುದ್ದಿ: ಪತ್ನಿ ಸಾವನ್ನಪ್ಪಿದ 4 ಗಂಟೆಗಳ ಬಳಿಕ ಪತಿಯೂ ಸಾವನ್ನಪ್ಪಿದ ಘಟನೆ ಸಾಸ್ತಾನ ಗುಂಡ್ಮಿಯಲ್ಲಿ ನಡೆದಿದೆ.

ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕರಾದ ಜೆ. ರತ್ನಾಕರಾಯ (84) ಮತ್ತು ಅವರ ಪತ್ನಿ ಸರೋಜಮ್ಮ (72) ಸಾವಿನಲ್ಲೂ ಒಂದಾದ ದಂಪತಿಗಳಾಗಿದ್ದಾರೆ.

ಸರೋಜಮ್ಮ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದರು. ಈ ವೇಳೆ ಪತ್ನಿಯ ಪಕ್ಕದಲ್ಲೇ ಇದ್ದ ರತ್ನಾಕರಾಯ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಕ್ಷಣ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೃತ ದಂಪತಿ ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.

Related Articles

Back to top button