ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಪದ್ಮಶಾಲಿ ಕುಣಿತ ಭಜನಾ ಸ್ಪರ್ಧೆ- 2024” ಉದ್ಘಾಟನೆ

Views: 332

ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರರಾದ ಸುರೇಶ್ ಶೆಟ್ಟಿಗಾರ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಭಗವಂತನನ್ನು ಒಲಿಸಿಕೊಳ್ಳಲು ಇರುವ ಮಾರ್ಗವೇ ಭಜನೆ ಭಗವಂತನ ಸಾಕ್ಷಾತ್ಕಾರ ಆಗುವುದರ ಜೊತೆಗೆ ಭಗವಂತನ ನಾಮಸ್ಮರಣೆ ನಿರಂತರ ಮಾಡಿದಾಗ ಫಲವು ನಮಗೆ ಸಿಗುತ್ತದೆ. ದೇವಸ್ಥಾನದಲ್ಲಿ ಭಜನಾ ಮಂದಿರದಲ್ಲಿ ದೈವಿಕ ಶಕ್ತಿ ಜಾಗ್ರತವಾಗಿ ಸಾಕ್ಷಾತ್ ಭಗವಂತ ನೆಲೆಸುತ್ತಾನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ. ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷರಾದ ರಾಮದಾಸ್ ಶೆಟ್ಟಿಗಾರ್ ಪಣಿಯಾಡಿ ಮಾತನಾಡಿ, ಭಜನೆ ಮೂಲಕ ಆಂತರಿಕ ಶುದ್ಧಿಯಾಗಿ ಬಹಿರಂಗದಲ್ಲಿ ನಲಿವು- ಗೆಲುವು ಜಾಸ್ತಿಯಾಗಿ ಸಮುದಾಯದೊಳಗೆ ಒಗ್ಗಟ್ಟು ಮತ್ತು ಐಕ್ಯತೆಯ ಭಾವವನ್ನು ಬೆಳೆಸುತ್ತದೆ. ನಮ್ಮೆಲ್ಲರ ಬದುಕು ಸನ್ಮಾರ್ಗದಲ್ಲಿ ನಡೆಯಲು ಭಜನೆ ಅತ್ಯವಶ್ಯಕವಾಗಿದೆ ಎಂದರು.
ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಶೆಟ್ಟಿಗಾರ್ ಕೊಡಿಯಾಲ್ ಬೈಲು, ಶ್ರೀಮತಿ ಹೇಮಾ ರಘು ಶೆಟ್ಟಿಗಾರ್, ರತ್ನಾಕರ ಶೆಟ್ಟಿಗಾರ್ ಗುರಿಕಾರರು ಹಳೆಯಂಗಡಿ, ಜಯಕರ ಶೆಟ್ಟಿಗಾರ ಕಾಪು, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಉಮೇಶ್ ಶೆಟ್ಟಿಗಾರ್, ಮಹಿಳಾ ವೇದಿಕೆಯ ಸಂಚಾಲಕಿ ಇಂದಿರಾ ಶೆಟ್ಟಿಗಾರ್, ಪುರಂದರ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಭಜನೆಯ ತೀರ್ಪುಗಾರರಾಗಿ ನರೇಶ್ ಮತ್ತು ರಮೇಶ್ ಕಲ್ಮಾಡಿ ಇದ್ದರು.

ಸತೀಶ್ ಶೆಟ್ಟಿಗಾರ್ ಆತ್ರಾಡಿ ಸ್ವಾಗತಿಸಿದರು. ಜಯರಾಮ್ ಮಣಿಪಾಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಮೀಕ್ಷಾ ಪ್ರಾರ್ಥಿಸಿದರು. ಪದ್ಮಶಾಲಿ ಮಹಾಸಭಾದ ಕಾರ್ಯದರ್ಶಿ ಎಸ್ ಟಿ ಶೆಟ್ಟಿಗಾರ್ ವಂದಿಸಿದರು.
ಕುಣಿತ ಭಜನಾ ಸ್ವರ್ಧೆ ವಿಜೇತರು
16 ದೇವಸ್ಥಾನಗಳ ವ್ಯಾಪ್ತಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದರು.
ಪ್ರಥಮ: ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಸಾಲಿಕೇರಿ
ದ್ವಿತೀಯ: ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಕಲ್ಯಾಣಪುರ
ತೃತೀಯ: ಶ್ರೀ ವೀರಭದ್ರ ದೇವಸ್ಥಾನ ಕಿನ್ನಿಮೂಲ್ಕಿ






