ಸಾಮಾಜಿಕ
ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಏಕಾಏಕಿ ನಾಪತ್ತೆ

Views: 564
ಕನ್ನಡ ಕರಾವಳಿ ಸುದ್ದಿ: ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯೊಬ್ಬರು ಏಕಾಏಕಿ ನಾಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಕೆ.ಬಿ.ಹೊಸಳ್ಳಿ ಶಾಲಾ ಶಿಕ್ಷಕಿ. 50 ವರ್ಷದ ಅಖ್ತರ್ ಬೇಗಂ ನಾಪತ್ತೆಯಾಗಿರುವ ಶಿಕ್ಷಕಿ. ಕೋಲಾರದ ನರಸಾಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದ ಅಖ್ತರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ
ನಿನ್ನೆ ಬೆಳಿಗ್ಗೆಯಿಂದ ಶಿಕ್ಷಕಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮನೆಯಲ್ಲಿಯೇ ಮೊಬೈಲ್ ಬಿಟ್ಟು ಐಡಿ ಕಾರ್ಡ್ ತೆಗೆದುಕೊಂಡು ಹೋಗಿದ್ದಾರೆ. ಸಮೀಕ್ಷೆ ಬಗ್ಗೆ ತೀವ್ರವಾಗಿ ಒತ್ತಡದಲ್ಲಿ ಇದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಕೋಲಾರದ ಅಂತರಗಂಗೆ ರಸ್ತೆಯಲ್ಲಿ ಪತಿಯೊಂದಿಗೆ ವಾಸವಾಗಿದ್ದರು. ಈಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು ಕುಟುಂಬ ಆತಂಕಕ್ಕೊಳಗಾಗಿದೆ. ಕೋಲಾರ ಠಾಣೆಯಲ್ಲಿ ದೂರು ದಾಖಲಾಗಿದೆ.