ಶಿಕ್ಷಣ

 ಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆ “ಜ್ಞಾನದಾ ಕಲಾ ವೈಭವ – 2025” ಬಹುಮಾನ ವಿತರಣೆ 

Views: 182

ಕನ್ನಡ ಕರಾವಳಿ ಸುದ್ದಿ:  ಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಜ್ಞಾನದಾ ಕಲಾ ವೈಭವ – 2025ರ ಅಂಗವಾಗಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಲಲಿತ್ ಕೆ ಮೆಸ್ತ, ಖ್ಯಾತ ವಿಜ್ಞಾನಿ ನಿರ್ದೇಶಕರು ಬಯೋಮೆಟ್ರಿಕ್ ರಿಸರ್ಚ್ ಯು ಎಸ್ ಎ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಶಿಕ್ಷಣ ಸಂಸ್ಥೆಯ ಸರ್ವಾಂಗೀಣ ಬೆಳವಣಿಗೆಯಲ್ಲಿ ಸಹಕರಿಸಬೇಕು ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಸಮೂಹ ಮಾಧ್ಯಮಗಳನ್ನು ಸಕಾರಾತ್ಮಕವಾಗಿ ಉಪಯೋಗಿಸಬೇಕು ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಮೂಲಕ ಸಾಕಷ್ಟು ಮಾಹಿತಿಗಳು ಸುಲಭವಾಗಿ ಲಭ್ಯವಾಗುತ್ತದೆ ಆದರೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಗೆ ಅಗತ್ಯ ಇರುವ ಮಾಹಿತಿಯನ್ನು ಮಾತ್ರ ಪಡೆದುಕೊಂಡು ಭವಿಷ್ಯವನ್ನು ಉಜ್ವಲ ಗೊಳಿಸಬೇಕು ಪ್ರತಿಯೊಂದು ಕೆಲಸದಲ್ಲಿಯೂ ಶಿಸ್ತು ಪರಿಶ್ರಮ ಗುಣಮಟ್ಟವನ್ನು ಕಾಯ್ದುಕೊಂಡಾಗ ಯಶಸ್ಸು ಖಂಡಿತ, ಯಾವುದೇ ಸಂದರ್ಭದಲ್ಲಿ ಇತರನ್ನು ಟೀಕಿಸದೆ ಪರಸ್ಪರ ಒಮ್ಮತದಿಂದ ಕಾರ್ಯ ನಿರ್ವಹಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಪರಂಪರೆ ಮತ್ತು ಪರಿಶ್ರಮಗಳನ್ನು ನೆಲೆಯಾಗಿಟ್ಟು ವಿದ್ಯಾರ್ಥಿಗಳು ಬೆಳೆಯಬೇಕು ಎಂದರು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆ ಅಡಕವಾಗಿರುತ್ತದೆ ಸತತ ಪರಿಶ್ರಮದೊಂದಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಪ್ರಶಸ್ತಿ ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ ಪ್ರಯತ್ನ ನಿರಂತರವಾಗಿರಬೇಕು ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡು ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಸಾಮಾಜಿಕ ಮೌಲ್ಯಗಳನ್ನು ಪಾಲಿಸಿ ಬದುಕಿನಲ್ಲಿ ಸೋಲು ಬಂದಾಗ ಅದನ್ನು ಸವಾಲಾಗಿ ಸ್ವೀಕರಿಸಿ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಬೇಕು ಎಂದು ಅಭಿಪ್ರಾಯಪಟ್ಟು ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಮೆಲುಕುಹಾಕಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರವನ್ನು ಸೋದಾಹರಣವಾಗಿ ತಿಳಿಸಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಅವರನ್ನು ಗುರಿ ಸಾಧನೆಗೆ ಉತ್ತೇಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಮಚಂದ್ರ ಬಿ ಶಿರೂರ್ಕರ್ ಹದಿಹರೆಯುವು ಬದುಕನ್ನು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಬೇಕಾದ ವಯಸ್ಸು ಹೆತ್ತವರು ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಸಾಧನೆಯ ಮೆಟ್ಟಿಲನ್ನು ಹತ್ತುವ ಪ್ರಯತ್ನ ನಮ್ಮದಾಗಬೇಕು ಸ್ವಾರ್ಥ ಚಿಂತನೆಯನ್ನು ಬದಿಗಿಟ್ಟು ಇತರರಿಗೆ ನೆರಳಾಗುವ ಪರಿಕಲ್ಪನೆ ನಮ್ಮೊಳಗೆ ಬೆಳೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಧೀರಜ್ ಆರ್ ಶಿರೂರ್ಕರ್ ಖಜಾಂಚಿ  ಶ್ರೀಮತಿ ಚಂಪಾ ಆರ್ ಶಿರೂರ್ಕರ್ ವಿದ್ಯಾರ್ಥಿ ನಾಯಕಿ ಕುಮಾರಿ ಸಾಂಸ್ಕೃತಿಕ ನಾಯಕಿ ಕುಮಾರಿ ಧನ್ವಿ ಭಟ್ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ. ರವಿದಾಸ್ ಶೆಟ್ಟಿ ಪ್ರಸ್ತಾವಿಸಿದರು ಶಿಕ್ಷಕಿಯರಾದ ರೇಣುಕಾ ಸ್ವಾಗತಿಸಿ, ಸಿಜಿ ವಿ ಪಿ ಕಾರ್ಯಕ್ರಮ ನಿರೂಪಿಸಿ ಶಿಕ್ಷಕ ಮಂಜುನಾಥ್ ದೇವಾಡಿಗ ವಂದಿಸಿದರು.

Related Articles

Back to top button