ಧಾರ್ಮಿಕ
ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ- ಅಷ್ಟಬಂಧ- ಬ್ರಹ್ಮಕಲಶೋತ್ಸವ “ಮನವಿ”

Views: 153
ಸಹೃದಯಿ ಭಕ್ತಾಭಿಮಾನಿಗಳೇ,
ಮನವಿ ಪತ್ರ ಬಿಡುಗಡೆ
ತಮಗೆಲ್ಲ ತಿಳಿದಂತೆ ಕರಾವಳಿ ಕರ್ನಾಟಕವು ದೇವಾಲಯಗಳ ಬೀಡು, ಅದರಲ್ಲೂ ಶಿವಾಲಯಗಳು ಇಲ್ಲಿನ ಶಕ್ತಿ, ಶಿವ ನಾಮ ಪಠಿಸುತ್ತಾ ಕೃತಾರ್ಥರಾಗುವ ಭಕ್ತ ಸಮೂಹ ಇರುವಂತಹ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದಲ್ಲಿ ಗ್ರಾಮ ಒಡೆಯನಾಗಿ ಪುಣ್ಯ ಪುಷ್ಕರಣಿಯ ತಟದಲ್ಲಿ ನೆಲೆಯಾದ ಕಲಿಯುಗದ ಪ್ರತ್ಯಕ್ಷ ದೇವರಾದ ನಾಗದೇವನ್ನೊಳಗೊಂಡ, ಪ್ರಕೃತಿಯ ಮಡಿಲಲ್ಲಿ ತನ್ನ ಭಕ್ತರನ್ನು ಪೊರೆಯುವ ಸಲುವಾಗಿ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಸ್ಥಿತನಾದ ಮಹಾಲಿಂಗೇಶ್ವರನು ಇಂದಿನವರೆಗೂ ತನ್ನ ಬಳಿ “ದೇಹಿ’ ಎಂದು ಬಂದವರಿಗೆ “ನಾಸ್ತಿ” ಎನ್ನದೇ ಸಕಲ ಇಷ್ಟಾರ್ಥಗಳಿಗೆ “ಅಸ್ತು” ಎನ್ನುತ್ತಿದ್ದಾನೆ.
ವಕ್ವಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧವಾದ ಕ್ಷೇತ್ರದಲ್ಲೊಂದಾಗಿದೆ. ಜೀರ್ಣಾವಸ್ಥೆಯಲ್ಲಿದ್ದ ಈ ದೇವಸ್ಥಾನವನ್ನು ಈ ಮೊದಲು 2007 ರಲ್ಲಿ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದೊಂದಿಗೆ ಶಿಲಾಮಯ ಗರ್ಭಗುಡಿ, ಮುಖ ಮಂಟಪ, ಹೆಬ್ಬಾಗಿಲು ಮತ್ತು ಸುತ್ತುಪೌಳಿಯ ನಿರ್ಮಾಣದೊಂದಿಗೆ ಜೀರ್ಣೋದ್ದಾರ ನಡೆಸಲಾಯಿತು.
ಆಗಮ ಶಾಸ್ತ್ರದ ಅನುಸಾರ ಶ್ರೀ ದೇವರಿಗೆ ಪ್ರತಿ 12 ವರ್ಷಕ್ಕೊಮ್ಮೆ ಅಷ್ಟಭಂದ ಮತ್ತು ಬ್ರಹ್ಮಕಲಶೋತ್ಸವ ನೆರವೇರಿಸುವುದು ಪ್ರತೀತಿ, ಅಂತೆಯೇ ನಮ್ಮ ದೇವಾಲಯದಲ್ಲಿ 17 ವರ್ಷಗಳ ನಂತರ ಆರೂಢ ಚಿಂತನೆಯ ಪ್ರಕಾರ ಬ್ರಹ್ಮ ಕಲಶೋತ್ಸವ ಸಂಪನ್ನಗೊಳಿಸುವ ಕಾಲ ಕೂಡಿ ಬಂದಿದೆ.
ಧಾರ್ಮಿಕ ಹಾಗೂ ಭೌತಿಕ ಕಾರ್ಯಕ್ರಮಗಳು
ಇತ್ತೀಚಿನ ಕೆಲವು ವರ್ಷಗಳಿಂದ ಗರ್ಭಗುಡಿಯ ಶಿಲಾಮಯ ಮೇಲ್ಟಾವಣಿ ಸೋರುತ್ತಿದ್ದು, ತಾಮ್ರದ ಹೊದಿಕೆಯನ್ನು ಹೊದಿಸುವ ಹಾಗೂ ಸುತ್ತುಪೌಳಿ ಮತ್ತು ಗರ್ಭಗುಡಿಯ ಮಧ್ಯದಲ್ಲಿ ಮೇಲ್ಛಾವಣಿ ಇಲ್ಲದಿರುವುದರಿಂದ ಪ್ರದಕ್ಷಿಣೆ ಹಾಕುವ ಭಕ್ತರಿಗೆ ಅನುಕೂಲ ಆಗುವಂತೆ ಸುತ್ತುಪೌಳಿಗೆ ಪಾರದರ್ಶಕ ಮೇಲ್ಬಾವಣಿಯನ್ನು ನಿರ್ಮಿಸುವ ಯೋಜನೆಯಿದೆ.
ಶ್ರೀ ಮಹಾಲಿಂಗೇಶ್ವರನಿಗೆ ಸಂಬಂಧಪಟ್ಟಂತೆ ಚಿಕ್ಕು, ಹಾಯ್ಸುಳಿ, ಯಕ್ಷಿ, ನಾಗ ಮುಂತಾದ ದೈವದೇವತೆಗಳನ್ನು ಒಳಗೊಂಡ ಶ್ರೀ ಹಳೆಯಮ್ಮ ದೇವಿಯ ದೇವಸ್ಥಾನ ಪಾಳು ಬಿದ್ದ ಸ್ಥಿತಿಯಲ್ಲಿದೆ ಮತ್ತು ಅದರ ಪುನರ್‌ನಿರ್ಮಾಣವಾಗಬೇಕೆಂದು 2007ರ ಅಷ್ಟ ಮಂಗಳ ಚಿಂತನೆಯಲ್ಲಿ ವ್ಯಕ್ತವಾಗಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಗುರುತಿಸಿ ನಿರ್ಮಾಣ ಮಾಡಲಾಗಲಿಲ್ಲ.
2025ರ ಆರೂಢ ಪ್ರಶ್ನೆಯಲ್ಲಿಯೂ ಸಹ ಇದೇ ಅಭಿಪ್ರಾಯ ವ್ಯಕ್ತವಾಗಿದ್ದು ತಪ್ಪಿದಲ್ಲಿ ಗ್ರಾಮದ ಮೇಲೆ ಸಕರಾತ್ಮಕ ಪರಿಣಾಮ ಬೀಳದೇ ಇರಬಹುದೆಂದು ಆರೂಢ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ಆದುದರಿಂದ ಸಪರಿವಾರ ಹಳೇಯಮ್ಮ ದೇವಸ್ಥಾನದ ಜೀರ್ಣೋದ್ಧಾರವೂ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಜೊತೆ ಜೊತೆಯಲ್ಲಿ ನೆರವೇರಿಸಬೇಕೆಂದು ಸಂಕಲ್ಪಿಸಲಾಗಿದೆ.
ಸುಮಾರು 30-35 ವರ್ಷಗಳ ಹಿಂದೆ ನಿರ್ಮಾಣಗೊಂಡ ಶ್ರೀ ಮಹಾಲಿಂಗೇಶ್ವರ ಸಭಾಭವನದ ಮೇಲ್ಬಾವಣೆ ಸಂಪೂರ್ಣ ಶಿಥಿಲಗೊಂಡಿದ್ದು, ಇದರ ದುರಸ್ಥಿ ಕಾರ್ಯವೂ ನಡೆಯಬೇಕಾಗಿದೆ. ಈ ಎಲ್ಲಾ ಜೀರ್ಣೋದ್ಧಾರ ಕಾರ್ಯವನ್ನು ಪೂರೈಸಲು ಸುಮಾರು 60ಲಕ್ಷ ರೂಪಾಯಿಯಷ್ಟು ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ.
ಈ ಪ್ರಯುಕ್ತ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕರೆದ ಊರವರ ಸಭೆಯಲ್ಲಿ ಊರ ಹಾಗೂ ಪರವೂರ ದಾನಿಗಳಿಂದ ಹಣ ಸಂಗ್ರಹಿಸಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ವೇದಮೂರ್ತಿ ಶ್ರೀ ಪ್ರಸನ್ನ ಕುಮಾರ ತಂತ್ರಿಗಳ ಮಾರ್ಗದರ್ಶನದಲ್ಲಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಈ ಪ್ರಯುಕ್ತ ತಾರೀಕು 27 ಮತ್ತು 28ನೇ ಫೆಬ್ರವರಿ 2025 ರಂದು ನಡೆದ ಭಕ್ತವೃಂದದವರ ಸಭೆಯಲ್ಲಿ ಶ್ರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ, ಶ್ರೀ ಬಿ.ಸಿ ಶೆಟ್ಟಿ ಹುಬ್ಬಳ್ಳಿ ಇವರ ಘನ ಅಧ್ಯಕ್ಷತೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಸಪರಿವಾರ ಶ್ರೀ ಹಳೆಯಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು.
ಊರ ಪರವೂರ ಭಕ್ತಾಭಿಮಾನಿಗಳೆಲ್ಲರು ತುಂಬು ಹೃದಯದಿಂದ ತನು ಮನ ಧನ ಸಹಾಯ ಮಾಡಿ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀದೇವಿ ನಿಮಗೆ ಸನ್ಮಂಗಳಗಳನ್ನುಂಟು ಮಾಡಲಿ ಎಂದು ಹಾರೈಸುತ್ತೇವೆ.
ಸದ್ರಿ ಕಾಮಗಾರಿಗಳಿಗೆ ಧನ ಸಹಾಯ ನೀಡಲಿಚ್ಛಿಸುವವರು ಈ ಕೆಳಗೆ ನಮೂದಿಸಿದ
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಬ್ಯಾಂಕ್ BANK OF BARODA ಗುಲ್ವಾಡಿ,
ACCOUNT NUMBER 81780100008332 IFSC: BARBOVJGULW
ಇದಕ್ಕೆ ಜಮಾ ಮಾಡಿ ತಮ್ಮ ವಿಳಾಸವನ್ನು
ಈ ಕೆಳಕಂಡ ಫೋನ್ ನಂಬರ್‌ಗೆ ತಿಳಿಸಬೇಕಾಗಿ ವಿನಂತಿಸುತ್ತೆವೆ.
9844277382, 6362898901
****ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ***
8088479250, 9844277382