ಆರ್ಥಿಕ

ಲೋನ್ ಕಟ್ಟದಿದ್ದಕ್ಕೆ 7 ವರ್ಷದ ಹೆಣ್ಣು ಮಗುವನ್ನು ಕರೆದೊಯ್ದು ಮೈಕ್ರೋ ಫೈನಾನ್ಸ್‌ ಸಿಬ್ಬಂದಿ

Views: 143

ಕನ್ನಡ ಕರಾವಳಿ ಸುದ್ದಿ: ಕೇವಲ 1,180 ರೂಪಾಯಿ ಲೋನ್ ಕಟ್ಟದಿದ್ದಕ್ಕೆ 7 ವರ್ಷದ ಹೆಣ್ಣು ಮಗುವನ್ನು ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಕರೆದೊಯ್ದು ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಾಲಹಳ್ಳಿ ಗ್ರಾಮದ ನವೀನ್ ಹಾಗೂ ಪ್ರಮೀಳಾ ದಂಪತಿ ಕೆಲ ಸಮಯದ ಹಿಂದೆ ಬಜಾಜ್ ಮೈಕ್ರೋ ಫೈನಾನ್ಸ್‌ನಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು. 13 ತಿಂಗಳು ಸರಿಯಾಗಿ ಲೋನ್ ಕಟ್ಟಿದ್ದ ಇವರು, ಈ ತಿಂಗಳು ನಾಲ್ಕು ದಿನ ತಡವಾಗಿ ಕಟ್ಟಿದ್ದಾರೆ. ಈ ಮಧ್ಯೆ ಮನೆಗೆ ಬಂದ ಬಜಾಜ್ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಮೊದಲು ನವೀನ್ ತಾಯಿಗೆ ಬೈದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ.

ಬಳಿಕ ಪಕ್ಕದ ಊರಿನಲ್ಲಿದ್ದ ಮಗುವಿನ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸು ಬಾ ಎಂದು ಫೈನಾನ್ಸ್‌ ಸಿಬ್ಬಂದಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಸಂಜೆ ತಾಳಿ ಅಡವಿಟ್ಟು ದುಡ್ಡು ಕೊಡುತ್ತೇವೆ ಎಂದರೂ ಬಿಡದೇ ಮಗುವಿಗೆ ಹಾಗೂ ನವೀನ್ ತಾಯಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ಈಗ ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.

Related Articles

Back to top button
error: Content is protected !!