ಸಾಮಾಜಿಕ
ರೋಟರಿ ಕ್ಲಬ್ ಕೋಟೇಶ್ವರ: “ರಾಜಕೀಯ ಮತ್ತು ರಾಜಕಾರಣ” ಉಪನ್ಯಾಸ ಕಾರ್ಯಕ್ರಮ

Views: 112
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ರೋಟರಿ ಕ್ಲಬ್ ವತಿಯಿಂದ “ರಾಜಕೀಯ ಮತ್ತು ರಾಜಕಾರಣ” ವಿಷಯದ ಕುರಿತು ಬುಧವಾರ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ರಾಜಕೀಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಅವರು ಉಪನ್ಯಾಸ ನೀಡುತ್ತಾ, ರಾಜಕೀಯವು ಶೂನ್ಯದಲ್ಲಿ ಹುಟ್ಟುವುದಿಲ್ಲ ಅದು ವ್ಯಕ್ತಿಯ ಸಾಮಾಜಿಕ ಮತ್ತು ರಾಜಕೀಯ ಅನುಭವ ಆಧಾರದಲ್ಲಿ ನೆಲೆ ನಿಂತಿದೆ. ಹುಮ್ಮಸ್ಸು, ಕಲ್ಪನೆ, ಮುನ್ನುಗ್ಗುವ ಪ್ರವೃತ್ತಿ ತಂಡದ ಗುರಿಯೊಂದಿಗೆ ಕೊಂಡೊಯ್ಯುವ ಸಾಮರ್ಥ್ಯವೇ ಉತ್ತಮ ನಾಯಕತ್ವ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾ ಹೆಚ್ಚೆಚ್ಚು ಜನರಿಗೆ ಉಪಯುಕ್ತವಾಗಿರುವ ಸೇವಾ ಚಟುವಟಿಕೆಗಳನ್ನು ಶೀಘ್ರವಾಗಿ ಜಾರಿಗೊಳಿಸುವುದಾಗಿ ಹೇಳಿದರು.
ನಿವೃತ್ತ ಶಿಕ್ಷಕ ಶ್ರೀನಿವಾಸ್ ಶೆಟ್ಟಿ ಪ್ರಾರ್ಥಿಸಿ, ಪರಿಚಯಿಸಿದರು. ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ ವಂದಿಸಿದರು.