ರೈಲು ಹರಿದು ಹುಬ್ಬಳ್ಳಿ ನಿವಾಸಿಯ ಮೂವರು ಬಾಲಕರು ಮೃತ್ಯು

Views: 0
ಕರ್ನಾಟಕ ಮೂಲದ ಮೂವರು ಬಾಲಕರು ಚೆನ್ನೈನ ಹೊರವಲಯದ ಉರಪಕ್ಕಂ ಬಳಿ ರೈಲು ಹರಿದು ಮೃತಪಟ್ಟ ಘಟನೆ ನಡೆದಿದೆ.ಮೃತರನ್ನು ಮಂಜುನಾಥ್ (11), ರವಿ (12), ಸುರೇಶ್ (14) ಎಂದು ಗುರುತಿಸಲಾಗಿದೆ.
ಹಳಿ ದಾಟುವಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇಬ್ಬರು ಬಾಲಕರು ಸಹೋದರರಾಗಿದ್ದಾರೆ. ಅವರಿಗೆ ವಾಕ್ ಮತ್ತು ಶ್ರವಣ ದೋಷ ಇತ್ತು. ಇನ್ನೊಬ್ಬ ಬಾಲಕನಿಗೆ ಮಾತು ಬರುತ್ತಿರಲಿಲ್ಲ ಎಂದು ಹೇಳಲಾಗಿದೆ. ಮೂವರು ಕೂಡ 11ರಿಂದ 15ರ ಹರೆಯದವರಾಗಿದ್ದಾರೆ.
ಮೃತ ಬಾಲಕರ ಪೋಷಕರು ಚೆನ್ನೈನಲ್ಲಿ ದಿನಗೂಲಿ ಮಾಡುತ್ತಿದ್ದರು. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತ ಬಾಲಕರು ಕರ್ನಾಟಕದ ಹುಬ್ಬಳ್ಳಿಯ ನಿವಾಸಿಗಳು ಎಂದು ಹೇಳಿದೆ.
ಸೋಮವಾರ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ. ವಂಡಲೂರು- ಉರಪ್ಪಕ್ಕಂ ನಡುವಿನ ರೈಲ್ವೆ ಹಳಿಯಲ್ಲಿ ಮೂವರು ಬಾಲಕರು ಆಟವಾಡುತ್ತಿದ್ದಾಗ ಚೆನ್ನೈ ಬೀಚ್ನಿಂದ ಚೆಂಗಲ್ಪೇಟ್ಗೆ ಹೋಗುತ್ತಿದ್ದ ಇಎಂಯು ರೈಲು ಢಿಕ್ಕಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಮಕ್ಕಳು ಆಟವಾಡುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ಹಾರ್ನ್ ಮಾಡಿದ್ದಾರೆ. ಆದರೆ ಮಕ್ಕಳಿಗೆ ವಾಕ್ ಮತ್ತು ಶ್ರವಣ ದೋಷ ಇದ್ದ ಕಾರಣ ಇದು ಕೇಳಿಸಿಲ್ಲ. ಇದರಿಂದ ದುರ್ಘಟನೆ ನಡೆದಿದೆ.






