ಸಾಂಸ್ಕೃತಿಕ

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟರವರಿಗೆ 60ರ ಸಾಧನಾ ಪುರಸ್ಕಾರ

Views: 0

ಕನ್ನಡ ಕರಾವಳಿ ಸುದ್ದಿ: ಮಹಿಳಾ ಮಂಡಲ (ರಿ.) ಕೋಟ ತನ್ನ 60ರ ಸಡಗರದಲ್ಲಿ ಪ್ರದಾನ ಮಾಡುವ ಸಾಧನಾ ಪುರಸ್ಕಾರವನ್ನು ಕೋಟ ವಿವೇಕ ಬಾಲಕಿಯರ ಪ್ರೌಢ ಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟರವರಿಗೆ ನೀಡಿ ಗೌರವಿಸಲಿದೆ.

ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕ, ಕಥೆಗಾರ, ವಿಮರ್ಶಕ, ಲೇಖಕ, ಅಂಕಣ ಬರಹಗಾರ, ನಿರೂಪಕ, ನಟ, ರಾಜ್ಯ ಸಂಪನ್ಮೂಲ ವ್ಯಕ್ತಿ, ಕಿರುಚಿತ್ರಗಾರ, ನಿರ್ಮಾಪಕ, ಶಿಕ್ಷಣ ಕ್ಷೇತ್ರಗಳ ಕಲಿಕೆಯ ನಾವೀನ್ಯ ವಿನ್ಯಾಸಗಾರ, ಕಾದಂಬರಿಕಾರ, 50ಕ್ಕೂ ಮಿಕ್ಕಿದ ಲೇಖನಗಳ ಮತ್ತು 28 ಕೃತಿಗಳ ರಚಕರು, ಕಾರಂತ ಥೀಂ ಪಾರ್ಕ್‌ ಕಾರ್ಯಕ್ರಮಗಳ ರೂವಾರಿ, ಅಂತ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡ “ಸುಗಂಧಿ” ಚಲನಚಿತ್ರದ ನಿರ್ಮಾಪಕ, ಸದಾ ಹೊಸ ಆವಿಷ್ಕಾರದ ಚಿಂತಕರಾಗಿರುವ ಶ್ರೀಯುತರಿಗೆ ಜ.12 ಆದಿತ್ಯವಾರ ಕೋಟ ಗಾಂಧಿ ಮೈದಾನದಲ್ಲಿ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.

Related Articles

Back to top button