ರಾಜಕೀಯ

ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಎಂ ಯೋಗಿ ವಿರುದ್ಧ ಬಿಜೆಪಿಯಲ್ಲಿ ಬಂಡಾಯದ ಬೇಗುದಿ!

Views: 237

ಉತ್ತರ ಪ್ರದೇಶ : ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ವಿರುದ್ಧ ಬಂಡಾಯದ ಬೇಗುದಿ ಆರಂಭ ಗೊಂಡಿದೆ.

ಅಯೋಧ್ಯೆಯನ್ನು ಸುಂದರ ನಗರಿಯನ್ನಾಗಿ ನವನಿರ್ಮಾಣ ಮಾಡಿದ ಕೀರ್ತಿ ಇದ್ಯಾವುದು ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯಲಿಲ್ಲ ಕಳೆದ ಬಾರಿ 62 ಸೀಟ್ ಗೆದ್ದಿದ್ದ ಬಿಜೆಪಿ ಈ ಬಾರಿ ಹೆಚ್ಚು ಕಡಿಮೆ ಅರ್ಧದಷ್ಟು ಸೀಟ್ ಗಳನ್ನು ಉತ್ತರ ಪ್ರದೇಶದಲ್ಲಿ ಕಳೆದುಕೊಂಡಿತು. ಈ ಎಲ್ಲಾ ಬೆಳವಣಿಗಳು ಈಗ ಉತ್ತರಪ್ರದೇಶದ ಕೇಸರಿ ಪಾಳಯದಲ್ಲಿ ಇನ್ನಷ್ಟು ಬೇಗುದಿಯನ್ನು ಸೃಷ್ಟಿಸಿದೆ.

ಅಹಂಕಾರ, ಏಕಚಕ್ರಾಧಿಪತಿ ಮನಸ್ಥಿತಿ ಬಿಜೆಪಿಯನ್ನು ಉತ್ತರಪ್ರದೇಶದಲ್ಲಿ ಈ ಸ್ಥಿತಿಗೆ ತಂದಿವೆ ಅನ್ನೋ ಮಾತುಗಳು ಕಮಲಪಡೆಯಲ್ಲಿಯೇ ಶುರುವಾಗಿವೆ.

ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಹಾಗೂ ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌದರಿ ಮುನಿಸಿಕೊಂಡಿದ್ದಾರೆ.

ಡಿಸಿಎಂ ಕೇಶವ ಪ್ರಸಾದ್ ಶರ್ಮಾ ಹಾಗೂ ಭೂಪೇಂದ್ರ ಸಿಂಗ್ ಚೌದರಿ ದೆಹಲಿಗೆ ತೆರಳಿ ಪಿಎಂ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಂದಿದ್ದಾರೆ. ಅಷ್ಟು ಮಾತ್ರವಲ್ಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಹಾಗೂ ಭೂಪೇಂದ್ರ ಸಿಂಗ್ ಚೌದರಿ ಪ್ರತ್ಯೇಕವಾಗಿ ಭೇಟಿ ಮಾಡಿದ್ದರು.

ಉತ್ತರಪ್ರದೇಶದ ಬಿಜೆಪಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಯಾವುದೇ ಭಿನ್ನಾಭಿಪ್ರಾಯಗಳು ಕಂಡು ಬಂದಿರಲಿಲ್ಲ. ಯುಪಿಯ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ್ದರು. 2017 ರಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ ಬಿಜೆಪಿ ಯೋಗಿ ಆದಿತ್ಯನಾಥರನ್ನು ಸಿಎಂ ಸ್ಥಾನಕ್ಕೆ ತಂದು ಕೂರಿಸಿತು. ಬಳಿಕ 2022ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಅಲ್ಲಿಯವರೆಗೂ ಎಲ್ಲಾ ಸರಿಯಿದ್ದ ಕಮಲಪಾಳಯದ ಮನೆಯ ಗೋಡೆಯಲ್ಲಿ ಲೋಕಸಬಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಅಲ್ಲಲ್ಲಿ ಬಿರುಕು ಬಿಡಲು ಶುರುವಾದವು.

ಡಿಸಿಎಂ ಕೇಶವ ಪ್ರಸಾದ್ ಶರ್ಮಾ ಸಿಎಂ ಯೋಗಿ ಆದಿತ್ಯನಾಥ ನಡುವಿನ ಶೀತಲ ಸಮರ ದೆಹಲಿಯ ಹೈಕಮಾಂಡ್ ಬಾಗಿಲವರೆಗೂ ತಲುಪಿತು. ಇದರ ಮಧ್ಯೆಯೇ ಯೋಗಿ ಆದಿತ್ಯನಾಥ್ ಯುಪಿಯ ರಾಜ್ಯಪಾಲರಾದ ಆನಂದಿ ಬೆನ್ ಪಟೇಲರನ್ನು ಭೇಟಿಯಾಗಿದ್ದು ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿದೆ.

 

Related Articles

Back to top button
error: Content is protected !!