ಮುಂಬಯಿ ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ
Views: 55
ಕನ್ನಡ ಕರಾವಳಿ ಸುದ್ದಿ: ಪದ್ಮಶಾಲಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುವ ಯೋಜನೆಗಳಲ್ಲಿ ಒಂದಾದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಮುಂಬಯಿ ಪದ್ಮಶಾಲಿ ಕಲಾ ಭವನದಲ್ಲಿ ಅ. 19ರ ಆದಿತ್ಯವಾರದಂದು ಆಯೋಜಿಸಲಾಯಿತು.
ಸುಮಾರು 63 ವಿದ್ಯಾರ್ಥಿಗಳು ಆರ್ಥಿಕ ಲಾಭವನ್ನು ಪಡೆದ ಈ ಕಾರ್ಯಕ್ರಮವನ್ನು ಅವರ ಪೋಷಕರು ಮನಸಾರೆ ಮೆಚ್ಚಿಕೊಂಡು ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿಗೆ ಧನ್ಯವಾದವನ್ನು ನೀಡಿದರು.

ಕಾರ್ಯಕ್ರಮವನ್ನು ಫಲಪ್ರದವಾಗಿಸಲು ಸಂಘದ ಗೌ. ಕಾರ್ಯದರ್ಶಿ ಕೇಶವ ವಿ. ಶೆಟ್ಟಿಗಾರ್, ಕೋಶಾಧಿಕಾರಿ ನವೀನ್ ಎಮ್. ಶೆಟ್ಟಿಗಾರ್, ಜತೆಕೋಶಾಧಿಕಾರಿ ವಿದ್ಯಾ ಎಚ್. ಪದ್ಮಶಾಲಿ ಹಾಗೂ ಸದಸ್ಯರಾದ ಉಮಾ ಜಿ. ಶೆಟ್ಟಿಗಾರ್, ಯಶೋಧಾ ಎಚ್. ಶೆಟ್ಟಿಗಾರ್, ಮಧುಸೂದನ್ ಡಿ. ಶೆಟ್ಟಿಗಾರ್, ಜಗನ್ನಾಥ್ ಟಿ. ಶೆಟ್ಟಿಗಾರ್, ಗಿರಿಧರ್ ಎಸ್. ಶೆಟ್ಟಿಗಾರ್, ಪ್ರವೀಣ್ ಆರ್. ಶೆಟ್ಟಿಗಾರ್, ಎಜ್ಯುಕೇಶನ್ ಸೊಸಾಟಿಯ ಕಾರ್ಯದರ್ಶಿ ರಮೇಶ್ ಪಿ. ಶೆಟ್ಟಿಗಾರ್, ಕೋಶಾಧಿಕಾರಿ ದೀಪಕ್ ಡಿ. ಶೆಟ್ಟಿಗಾರ್, ಮಹಿಳಾ ಬಳಗದ ಅಧ್ಯಕ್ಷೆ ಪ್ರಮೀಳಾ ಎಮ್. ಶೆಟ್ಟಿಗಾರ್, ಕಾರ್ಯದರ್ಶಿ ತಾರಾ ಯು. ಶೆಟ್ಟಿಗಾರ್ ಹಾಗೂ ಸದಸ್ಯರಾದ ಶಶಿತಾ ಎಸ್. ಶೆಟ್ಟಿಗಾರ್, ಜಯಶ್ರೀ ಕೆ. ಪದ್ಮಶಾಲಿ, ರಾಧಾ ಬಿ. ಶೆಟ್ಟಿಗಾರ್, ಯುವ ಸಮಿತಿಯ ಕಾರ್ಯದರ್ಶಿ ಅಭಿಲಾಶ್ ಎಲ್. ಶೆಟ್ಟಿಗಾರ್ ಹಾಗೂ ಸದಸ್ಯರಾದ ಮೈನಾ ಎಮ್. ಶೆಟ್ಟಿಗಾರ್, ದೀಪಕ್ ಎಸ್. ಶೆಟ್ಟಿಗಾರ್, ಸುಮಂತ್ ಕೆ. ಶೆಟ್ಟಿಗಾರ್, ಮನೀಶ್ ಪಿ. ಶೆಟ್ಟಿಗಾರ್, ಪ್ರಕೃತಿ ಎ. ಶೆಟ್ಟಿಗಾರ್, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಜಯೇಶ್ ಎ. ಶೆಟ್ಟಿಗಾರ್, ಕ್ರೀಡಾ ಸಮಿತಿಯ ಸಂಚಾಲಕರಾದ ವಿಶಾಲ್ ಎಸ್. ಶೆಟ್ಟಿಗಾರ್, ಬೆನೆವೆಲೆನ್ಸ್ ಸಮಿತಿಯ ಸಂಚಾಲಕಿ ಸರೋಜಿನಿ ಎಚ್. ಶೆಟ್ಟಿಗಾರ್ ಹಾಗೂ ಸದಸ್ಯರಾದ ಭೋಜ ಸಿ. ಶೆಟ್ಟಿಗಾರ್ ಮತ್ತು ಸಂಘದ ಸಲಹೆಗಾರ ಕೆ. ಕೆ. ಪದ್ಮಶಾಲಿ ಸಹಕರಿಸಿದರು.
ಸಂಘದ ಅಧ್ಯಕ್ಷ ಕೃಷ್ಣಾನಂದ ಎಮ್. ಶೆಟ್ಟಿಗಾರ್, ಎಜ್ಯುಕೇಶನ್ ಸೊಸೈಟಿಯ ಸಭಾಪತಿ ಶಿವಾನಂದ ಆರ್. ಶೆಟ್ಟಿಗಾರ್ ಹಾಗೂ ಸಂಘದ ನಿಕಟಪೂರ್ವ ಅಧ್ಯಕ್ಷ ಉತ್ತಮ ಶೆಟ್ಟಿಗಾರ್ ವಿದ್ಯಾರ್ಥಿ ಮತ್ತು ಪಾಲಕರನ್ನುದ್ದೇಶಿಸಿ ಹಿತ ನುಡಿಗಳನ್ನಾಡಿ, ಧನ್ಯವಾದವನ್ನರ್ಪಿಸಿ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಪೂಜೆಯ ಪ್ರಸಾದ ಪಡೆದ ಬಳಿಕ ವಿದ್ಯಾರ್ಥಿ ವೇತನಗಳನ್ನು ಚೆಕ್ ಮೂಲಕ ವಿತರಿಸಲಾಯಿತು. ವಿದ್ಯಾರ್ಥಿ, ಪಾಲಕರು ಸೇರಿ ಸುಮಾರು 130 ಮಂದಿ ಭಾಗವಹಿಸಿದ್ದ ಈ ಕಾರ್ಯಕ್ರಮವು ಮಧ್ಯಾಹ್ನದವರೆಗೆ ನಡೆದು ಪ್ರೀತಿ ಭೋಜನದೊಡನೆ ಸಂಪನ್ನಗೊಂಡಿತು.






