ಸಾಂಸ್ಕೃತಿಕ
ಮದುವೆಯಾಗುವ ಹುಡುಗನ ಬಗ್ಗೆ ಚೈತ್ರಾ ಕುಂದಾಪುರ ತಾಯಿಗೆ ಹೇಳಿದ್ದೇನು?
Views: 216
ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್ ಮನೆಯಲ್ಲಿ 90 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಗೆಲುವಿನಡೆಗೆ ಮುನ್ನುಗ್ಗುತ್ತಿರುವ ಚೈತ್ರಾ ಕುಂದಾಪುರ ಅವರಿಗೆ ‘ಗೆದ್ದು ಬಾ ತಂಗಿ’ ಎಂದು ಕುಂದಾಪುರದಲ್ಲಿ ಕಟೌಟ್ ಗಳು ರಾರಾಜಿಸುತ್ತಿದೆ.
ನಾನು ಮದುವೆ ಫಿಕ್ಸ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ ಅಂತ ನಾನು ಮೊದಲೇ ಹೇಳಿದ್ದೇನೆ ಎಂದು ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಬಹಿರಂಗಪಡಿಸಿದ್ದರು.
ಚೈತ್ರಾ ಕುಂದಾಪುರ ಅವರ ಕುಟುಂಬದವರು ಬಿಗ್ ಬಾಸ್ ಮನೆಗೆ ಬಂದಾಗ ಚೈತ್ರಾ ಅವರಿಗೆ ತುಂಬಾ ಖುಷಿ ಕೊಟ್ಟಿದೆ.ತಾಯಿ ಬಿಗ್ ಬಾಸ್ ಮನೆಯಿಂದ ಹಿಂತಿರುಗುವಾಗ ಚೈತ್ರಾ ಅವರು ಹುಡುಗನ ಬಗ್ಗೆ ಮಾತನಾಡಿದ್ದಾರೆ.
ಮದುವೆಯಾಗುವ ಹುಡುಗ ಚಿಂತೆ ಮಾಡಿಕೊಳ್ಳುವುದು ಬೇಡ ಎಂದು ಹೇಳಿ ಬಿಡು ಎಂದಿದ್ದಾರೆ. ಚೈತ್ರ ಕುಂದಾಪುರ ಬಿಗ್ ಬಾಸ್ ನಿಂದ ಬಂದ ಬಳಿಕ ಮದುವೆ ಆಗುವ ಆಲೋಚನೆಯಲ್ಲಿದ್ದು, ಹುಡುಗ ಯಾರು ಎಂಬ ವಿಚಾರವನ್ನು ಅವರು ಈವರೆಗೂ ರಿವೀಲ್ ಮಾಡಲೇ ಇಲ್ಲ