ಸಾಮಾಜಿಕ
ಮದುವೆಗೆ ಮುನ್ನ ಹಠಾತ್ ಹೃದಯಾಘಾತದಿಂದ ವಧು ಸಾವು
Views: 133
ಕನ್ನಡ ಕರಾವಳಿ ಸುದ್ದಿ: ಚಿಕ್ಕಮಗಳೂರು ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ ವಧು ಶೃತಿ (32) ಅವರು ಮದುವೆಗೆ ಮುನ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನವೆಂಬರ್ 1ರಂದು ತರೀಕೆರೆ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಶೃತಿ ಮತ್ತು ತರೀಕೆರೆಯ ದಿಲೀಪ್ ಅವರ ಜೊತೆ ವಿವಾಹ ನಿಗದಿಯಾಗಿತ್ತು. ಎರಡೂ ಕುಟುಂಬಗಳು ಮದುವೆಯ ಸಿದ್ಧತೆಗಳಲ್ಲಿ ತೊಡಗಿದ್ದ ಸಮಯದಲ್ಲಿ, ಗುರುವಾರ ವಧು ಶೃತಿ ಅವರು ತನ್ನ ಮನೆಯಲ್ಲಿದ್ದಾಗ ಹಠಾತ್ ಹೃದಯಾಘಾತಕ್ಕೆ ತುತ್ತಾಗಿದ್ದಾರೆ.
ಮಗಳ ಮದುವೆಯನ್ನು ಕಂಡು ಸಂತೋಷಿಸಲು ಸಿದ್ಧರಾಗಿದ್ದ ಬಂಧು-ಬಳಗದವರು ಅಕಾಲ ಮರಣದ ದುಃಖ ಅನುಭವಿಸುತ್ತಿದ್ದಾರೆ. ಇನ್ನೂ ವರನ ಕುಟುಂಭವೂ ಈ ಸುದ್ದಿ ಕೇಳಿ ತೀವ್ರ ದುಃಖ ಹೊರಹಾಕಿದ್ದಾರೆ.






