ಇತರೆ

ಭೀಕರ ರಸ್ತೆ ಅಪಘಾತದಲ್ಲಿ 5ಜನ ಇಂಜಿನಿಯರ್ ಪೈಕಿ ಮೂವರು ಇಂಜಿನಿಯರ್​ಗಳು ಸ್ಥಳದಲ್ಲೇ  ಸಾವು

Views: 0

ಬೆಂಗಳೂರು ಗ್ರಾಮಾಂತರ, ಡಿವೈಡರ್‌ಗೆ ಗುದ್ದಿ ನುಜ್ಜು ಗುಜ್ಜಾಗಿರುವ ಕಾರು, ಕಾರಿನೊಳಗೆ ಸಿಲುಕಿರುವ ಮೃತದೇಹಗಳು, ಮೃತ ದೇಹ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿಗಳ ಹರಸಾಹಸ, ಸ್ಥಳದಲ್ಲಿ ಕಿಕ್ಕಿರಿದಿರುವ ಜನ. ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರ ತಾಲೂಕು ಅಂಚೆಪಾಳ್ಯದಲ್ಲಿ. ಹೌದು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 5ಜನ ಇಂಜಿನಿಯರ್ ಪೈಕಿ ಮೂರು ಜನ ಇಂಜಿನಿಯರ್​ಗಳು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇನ್ನುಳಿದ ಇಬ್ಬರು ಇಂಜಿನಿಯರ್​ಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಆಗಸ್ಟಿನ್ ನಿರೋಷ್, ದಾ ರೆಡ್ಡಿ, ವಿಘ್ನೇಶ್ ಸ್ಥಳದಲ್ಲೆ ಸಾವನ್ನಪ್ಪಿದ್ರೆ, ಮಿಥುನ್ ಯಾದವ್ ಹಾಗೂ ಶತೃಘ್ನ ಇಬ್ಬರು ಕೋಮಾಗೆ ಹೋಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೌದು ಮೃತರೆಲ್ಲರು ಬೆಂಗಳೂರಿನ ಖಾಸಗಿ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಗಳಾಗಿದ್ದರು. ನಿನ್ನೆ(17) ಭಾನುವಾರ ರಜೆ ಇದ್ದಿದ್ದರಿಂದ ಒಂದು ದಿನದ ಪಿಕ್‌ನಿಕ್ ಹೋಗಿ ಬರೋಣ ಎಂದು ಮೈಸೂರು ಟ್ರಿಪ್ ಹೋಗಿದ್ದರು. ಮೈಸೂರಿಗೆ ತೆರಳಿ ವಾಪಸ್ ಬರುತ್ತಿದ ಇವರು ಇನ್ನೇನು ಕೆಲವೇ ನಿಮಿಷಗಳಲ್ಲಿ ತಮ್ಮ ತಮ್ಮ ಮನೆಗಳನ್ನ ತಲುಪುತಿದ್ದರು.

ಕಾರು ಚಾಲಕ ಆಗಸ್ಟೀನ್ ಮುಂಜಾನೆಯ ನಿದ್ದೆ ಮಂಪರಿನಲ್ಲಿ ಮನೆಗೆ ತೆರಳುವ ಆತುರದಲ್ಲಿ ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಜನ ಇಂಜಿನಿಯರ್​ಗಳು ಚಾಲಕ ಅಗಸ್ಟಿನ್ ನಿರೋಷ್ ಸೇರಿದಂತೆ ಮೂರು ಜನ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.‌ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಅದೇನೆ ಇರಲಿ ಗೌರಿ-ಗಣೇಶ ಹಬ್ಬದ ಆಚರಣೆಯಲ್ಲಿ ಇರಬೇಕಾದ ಕುಟುಂಬಗಳು, ಶೋಕ ಸಾಗರದಲ್ಲಿ ಮುಳುಗಿರೋದು ನೋವಿನ ಸಂಗತಿ.

Related Articles

Back to top button
error: Content is protected !!