ಬ್ಯಾಂಕ್‌ನ ನಕಲಿ ಮುದ್ರೆ, ಸಹಿ ಬಳಸಿ ಉದ್ಯೋಗ ಪಡೆಯಲು ವಿಫಲ ಯತ್ನ!

Views: 213
ಕನ್ನಡ ಕರಾವಳಿ ಸುದ್ದಿ:ಬ್ಯಾಂಕ್‌ನ ನಕಲಿ ಮುದ್ರೆ, ಸಹಿ ಬಳಸಿ ಉದ್ಯೋಗ ಪಡೆಯಲು ವಿಫಲ ಯತ್ನ ಉಡುಪಿ ಸಂತೆಕಟ್ಟೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ಶಾಖೆಯಲ್ಲಿ ನಡೆದಿದೆ.
ಬ್ಯಾಂಕ್‌ನ ನಕಲಿ ಮುದ್ರೆ ಹಾಗೂ ಸಹಿ ಬಳಸಿಕೊಂಡು ಸಂತೆಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ಶಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರ ನೇಮಕಾತಿಗೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.
ಅದರಂತೆ ಸಂತೋಷ್ ಎಂಬಾತ 2023ರಸೆ. 25ರಂದು ದ್ವಿತೀಯ ದರ್ಜೆ ಗುಮಾಸ್ತರ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದು, ಬ್ಯಾಂಕಿನಿಂದ ಸಂತೋಷ್‌ಗೆ ಪರೀಕ್ಷೆಗೆ ಹಾಜರಾಗಲು 2025ರ ಮಾ. 9ರಂದು ನೋಟಿಸ್ ಕಳುಹಿಸಲಾಗಿತ್ತು. ಆದರೆ ಸಂತೋಷ್ ಪರೀಕ್ಷೆಗೆ ಹಾಜರಾಗದೇ ಯಾವುದೇ ಪರೀಕ್ಷೆ ಬರೆಯದೆ 2025ರ ಆ. 5ರಂದು ಬೆಳಗ್ಗೆ ಬ್ಯಾಂಕ್ ಶಾಖೆಗೆ ತೆರಳಿ ಜು. 19 ಮತ್ತು 26ರ ಎರಡು ನೇಮಕಾತಿ ಪತ್ರಗಳ ಪ್ರತಿಗಳನ್ನು ಹಾಜರುಪಡಿಸಿ ಶಾಖೆಗೆ ವರದಿ ಮಾಡಲು ಬಂದಿರುವುದಾಗಿ ತಿಳಿಸಿದನು. ಆತ ಹಾಜರುಪಡಿಸಿದ ನೇಮಕಾತಿ ಪತ್ರಗಳನ್ನು ಪರಿಶೀಲನೆ ನಡೆಸಿದಾಗ ಬ್ಯಾಂಕ್‌ನಿಂದ ಸಂತೋಷ್ ಗೆ ಯಾವುದೇ ನೇಮಕಾತಿ ಪತ್ರವನ್ನು ಕಳುಹಿಸದಿರುವುದು ಕಂಡು ಬಂತು.
ಬಳಿಕ ಆತನನ್ನು ವಿಚಾರಿಸಿದಾಗ ಸೂರ್ಯಕಾಂತ್, ಭರತ್ ಮತ್ತು ಗೋಪಾಲ್ ಅವರು ಸೇರಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ಶಾಖೆಯ ನಕಲಿ ಮುದ್ರೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸಹಿಯನ್ನು ಫೋರ್ಜರಿ ಮಾಡಿ ನೀಡಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಸಂತೆಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ಶಾಖೆಯ ವ್ಯವಸ್ಥಾಪಕಿ ಚೇತನಾ ಅವರು ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.