ಬಿರಿಯಾನಿ ತಿನ್ನಿಲು ಹಣ ನೀಡದ ವ್ಯಕ್ತಿಗೆ ಇರಿದು ಇರಿದು ಕೊಲೆ:ಅದು ಸಾಲದೆ ಮೃತದೇಹವನ್ನು ರಸ್ತೆಯಲ್ಲಿ ಎಳೆದಾಡಿ ನೃತ್ಯ ಮಾಡಿದ ಬಾಲಕ!

Views: 0
ದೆಹಲಿ: 18 ವರ್ಷದ ಯುವಕನೋರ್ವ ತನಗಿಂತ ಹಿರಿಯ ಯುವಕನಿಗೆ 60 ಬಾರಿ ಚುಚ್ಚಿ ಕೊಂದ ಘಟನೆ ದೆಹಲಿ ಈಶಾನ್ಯ ಭಾಗದಲ್ಲಿ ಬೆಳಕಿಗೆ ಬಂದಿದೆ. ಬಿರಿಯಾನಿ ತಿನ್ನಲು ಹಣ ಕೊಡಲು ನಿರಾಕರಿಸಿದ್ದಕ್ಕೆ ಅಪರಿಚಿತ ಯುವಕನಿಗೆ ಚಾಕು ಇರಿದಿದ್ದಾನೆ. ಬಳಿಕ ಮೃತದೇಹದ ಬಳಿ ನೃತ್ಯ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿ ನಶೆಯಲ್ಲಿ ಕೊಲೆ ಮಾಡಿದ್ದಾನೆ. ಬಿರಿಯಾನಿ ತಿನ್ನು ಆಸೆಗೆ ಅಪರಿಚಯ ಯುವಕನ ಬಳಿ 350 ರೂಪಾಯಿ ಕೇಳೀದ್ದಾನೆ. ಆತ ಕೊಡಲು ನಿರಾಕರಿಸಿದ್ದಕ್ಕೆ ಜಗಳ ಮಾಡಿದ್ದಾನೆ. ಬಳಿಕ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ನಂತರ ಕತ್ತು ಹಿಡಿದು ಕೊಂದಿದ್ದಾನೆ. ಕುತ್ತಿಗೆ, ಮುಖದ ಭಾಗಕ್ಕೆ ಚೂರಿಯಲ್ಲಿ ಚುಚ್ಚಿದ್ದಾನೆ. ಚೂರಿಯಿಂದ ಇರಿಯುತ್ತಾ ಬಳಿಕ ಆತನನ್ನು ರಸ್ತೆಯುದ್ಧಕ್ಕೂ ಎಳೆದೊಯ್ದಿದ್ದಾನೆ. ನಂತರ ತಲೆಗೆ ಒದ್ದಿದ್ದಾನೆ.
ಈಶಾನ್ಯ ಪೊಲೀಸ್ ಉಪ ಆಯಕ್ತರು ಜಾಯ್ ಟರ್ಕಿ ಈ ಬಗ್ಗೆ ಮಾತನಾಡಿದ್ದು, ‘ಮಂಗಳವಾರ ರಾತ್ರಿ 11.15ರ ಸುಮಾರಿಗೆ ಪಿಸಿಆರ್ಗೆ ಕರೆ ಬರುತ್ತದೆ. ಸ್ವಾಗತ ಪ್ರದೇಶದ ಜಂತಾ ಮಜ್ದೂರ್ ಕಾಲೋನಿಯಲ್ಲಿ 16 ವರ್ಷದ ಯುವಕನೋರ್ವ 18 ವರ್ಷದವನನ್ನು ಚಾಕುವಿನಿಂದ ಕೊಂದಿದ್ದಾನೆ’ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಅವರು, ’ಸಂತ್ರಸ್ತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಆತನ ಸಾವನ್ನಪ್ಪಿದ್ದಾನೆ’ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.







