ಸಾಂಸ್ಕೃತಿಕ

ಬಿಗ್ ಬಾಸ್ ನಿಂದ ಹೊರಬಂದು ಕಿಚ್ಚ ಸುದೀಪ್ ಉದ್ದೇಶಿಸಿ ಪೋಸ್ಟ್ ಹಾಕಿದ ಶೋಭಾ ಶೆಟ್ಟಿ

Views: 184

ಕನ್ನಡ ಕರಾವಳಿ ಸುದ್ದಿ:ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ. ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ’ ಎಂದು ಶೋಭಾ ಶೆಟ್ಟಿ ಪೋಸ್ಟ್ ಆರಂಭಿಸಿದ್ದಾರೆ.

ಶೋಭಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಎಲಿಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಕೇವಲ ಎರಡು ವಾರಕ್ಕೆ ಹೊರಕ್ಕೆ ಬಂದಿದ್ದಾರೆ. ಇದಕ್ಕಾಗಿ ಅವರು ಅನಾರೋಗ್ಯದ ಕಾರಣ ನೀಡುತ್ತಿದ್ದಾರೆ. ಆಡಬೇಕು ಎಂದುಕೊಂಡರೂ ಆರೋಗ್ಯ ಸಹಕರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಬಿಗ್ ಬಾಸ್ನಿಂದ ಹೊರ ಬಂದ ಅವರು ಸುದೀರ್ಘ ಪೋಸ್ಟ್ ಹಾಕಿದ್ದಾರೆ. ಸುದೀಪ್ಗೆ ಧನ್ಯವಾದ ಹಾಕಿದ್ದಾರೆ.

‘ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ. ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನಾನು ಈ ನಿರ್ಧಾರ ಮಾಡಿರುವೆ’ ಎಂದು ಪತ್ರ ಆರಂಭಿಸಿದ್ದಾರೆ ಶೋಭಾ ಶೆಟ್ಟಿ.

‘ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಹಾಗು ನಿನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು’ ಎಂದಿದ್ದಾರೆ ಅವರು.

‘ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ’ ಎಂದು ಶೋಭಾ ಅವರು ಭರವಸೆ ನೀಡಿದ್ದಾರೆ. ಈ ಪೋಸ್ಟ್ಗೆ ‘ಪ್ರಯಾಣವು ಅನಿರೀಕ್ಷಿತ ತಿರುವು ಪಡೆಯಿತು. ಆದರೆ ಎಲ್ಲದಕ್ಕೂ ಒಂದು ಕಾರಣವಿದೆ’ ಎಂದು ಬರೆದುಕೊಂಡಿದ್ದಾರೆ.

 

Related Articles

Back to top button