ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

Views: 211
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಕರಾವಳಿ ಶೆಟ್ಟಿಗಾರ್/ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಐದು ವರ್ಷಗಳ ಕಾಲ ಉತ್ತಮವಾಗಿ ಆಡಳಿತ ಮೊಕ್ತೇಸರರಾಗಿ ನಿರ್ವಹಿಸಿರುವ ಡಾ. ಜಯರಾಮ್ ಶೆಟ್ಟಿಗಾರ್ ರವರು ನೂತನ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾಗಿರುವ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಅವರಿಗೆ ಎ.7ರಂದು ಸೋಮವಾರ ಅಧಿಕಾರ ಹಸ್ತಾಂತರಿಸಿದರು.
ಇವರು ಶೆಟ್ಟಿಗಾರ್ ಇಂಡಸ್ಟ್ರೀಸ್ ಸಮೂಹ ಸಂಸ್ಥೆಯ ಮಾಲಕರು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ಉತ್ತಮ ಸಮಾಜ ಸೇವಕರಾಗಿದ್ದಾರೆ. ಇವರು 2010-15 ಸಾಲಿನಲ್ಲಿ ಆಡಳಿತ ಮೊಕ್ತೇಸರರಾಗಿದ್ದು, ಇದೀಗ ಎರಡನೇ ಬಾರಿಗೆ ಮೊಕ್ತೇಸರರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಆಡಳಿತ ಮಂಡಳಿ ಸದಸ್ಯರಾಗಿ
ಡಾ.ಶಿವಪ್ರಸಾದ್ ಶೆಟ್ಟಿಗಾರ್ ಉಡುಪಿ, ಭಾಸ್ಕರ್ ಶೆಟ್ಟಿಗಾರ ಸಂತೆಕಟ್ಟೆ, ವಿನಯ್ ಕುಮಾರ್ ಸಿ ಕೆ, ಸುರೇಶ್ ಹೆಂಗವಳ್ಳಿ, ಶಶಿಧರ್ ಶೆಟ್ಟಿಗಾರ್ ಬಾರ್ಕೂರು, ಮಹಾಬಲ ಶೆಟ್ಟಿಗಾರ ಯಡಾಡಿ, ಸುರೇಂದ್ರ ಶೆಟ್ಟಿಗಾರ ಚೀರ್ಕಾಡಿ, ಶ್ರೀಮತಿ ಆಶಾಲತಾ ವಿಠಲ ಶೆಟ್ಟಿಗಾರ ಕೆಳಾರ್ಕಳಬೆಟ್ಟು, ಡಾ.ಚಂದ್ರಶೇಖರ್ ವಿ.ಎಸ್ ಕೆಳಾರ್ಕಳಬೆಟ್ಟು, ರಾಮಚಂದ್ರ ಶೆಟ್ಟಿಗಾರ್ ಕೆಳಾರ್ಕಳಬೆಟ್ಟು, ಶ್ರೀನಿವಾಸ್ ಶೆಟ್ಟಿಗಾರ್ ಜಪ್ತಿ, ಜನಾರ್ಧನ್ ಶೆಟ್ಟಿಗಾರ್ ವಕ್ವಾಡಿ, ಸಂತೋಷ್ ಶೆಟ್ಟಿಗಾರ್ ಹಂದಾಡಿ, ವಿವೇಕಾನಂದ ಶೆಟ್ಟಿಗಾರ ಬಸ್ರೂರು ಆಯ್ಕೆಯಾಗಿದ್ದಾರೆ.