ಶಿಕ್ಷಣ

ಬಸ್ರೂರು ಶ್ರೀ ಅಪ್ಪಣ್ಣ ಹೆಗ್ಡೆಯವರ 91ನೇ ಹುಟ್ಟುಹಬ್ಬದ ಆಚರಣೆ

Views: 55

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಅಪ್ಪಣ್ಣ ಹೆಗ್ಡೆಯವರ 91ನೇ ಹುಟ್ಟುಹಬ್ಬದ ಆಚರಣೆ:ದಿನಾಂಕ 24/12/2025ರಂದು ವಕ್ವಾಡಿಯ ಗುರು ಕುಲ ಪದವಿ ಪೂರ್ವ ಕಾಲೇಜಿನಲ್ಲಿ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಸಂಸ್ಥಾಕರಾದ ಸರ್ವ ಶ್ರೀ ಬಿ ಅಪ್ಪಣ ಹೆಗ್ಡೆಯವರ 91ನೇ ಹುಟ್ಟುಹಬ್ಬದ ಆಚರಣೆಯನ್ನು ಪ್ರೀತಿ ಗೌರವದಿಂದ ಆಚರಿಸಲಾಯಿತು.

ಕಾಲೇಜಿನ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಶ್ರೀಯುತ ಬಿ ಅಪ್ಪಣ್ಣ ಹೆಗ್ಡೆಯವರ ಭಾವಚಿತ್ರವನ್ನು ಜೋಡಿಸುವ ಮೂಲಕ ಶ್ರೀಯುತರಿಗೆ ಶುಭ ಕೋರಿದರು. ಬಾಂಡ್ಯ ಎಜುಕೇಶನಲ್ ಟ್ರಸ್ಟನ ಜಂಟಿ ಕಾರ್ಯನಿರ್ವಾಹಕರಾದ ಶ್ರೀ.ಕೆ. ಸುಭಾಶ್ಚಂದ್ರ ಶೆಟ್ಟಿ ಹಾಗೂ ಶ್ರೀಮತಿ ಅನುಪಮಾ ಎಸ್ ಶೆಟ್ಟಿಯವರು ಶ್ರೀಬಿ. ಅಪ್ಪಣ್ಣ ಹೆಗ್ಡೆಯವರ ಸಮಾಜಮುಖಿ ಕಾರ್ಯಕ್ರಮಗಳನ್ನು ನೆನದರು. ಎಂ.ಐ.ಟಿ. ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ.ಹರಿಣಾಕ್ಷಿ ಕರ್ಕೇರ, ಕಾಲೇಜಿನ ಪ್ರಾಂಶುಪಾಲರಾದ ಡಾ. ರೂಪ ಶಣೈ, ಬೋಧಕ/ಬೋಧಕೇತರ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪೌರವ್ ಸರ್ವರನ್ನು ಸ್ವಾಗತಿಸಿ, ವಂದಿಸಿದರು.

Related Articles

Back to top button