ಇತರೆ
ಪ್ರೇಯಸಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಪ್ರಿಯಕರ ಪರಾರಿ

Views: 0
ಹಾಸನ: ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ ನಡೆದಿರುವ ಘಟನೆ ಹಾಸನ ತಾಲೂಕಿನ ಕುಂತಿಗುಡ್ಡದಲ್ಲಿ ನಡೆದಿದೆ. ಸುಚಿತ್ರಾ (20) ಕೊಲೆಯಾದ ಯುವತಿ.

ತೇಜಸ್ (23) ಕೊಲೆ ಮಾಡಿರುವ ಆರೋಪಿ. ಕೊಲೆಯಾದ ಸುಚಿತ್ರಾ ಆಲೂರು ತಾಲೂಕಿನ ಕವಳಗೆರೆ ಗ್ರಾಮದವಳು. ಸುಚಿತ್ರಾ ಮೊಸಳೆಹೊಸಳ್ಳಿ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಮ್ಯಾಕಾನಿಕಲ್ ಓದುತ್ತಿದ್ದರು.
ಸುಚಿತ್ರಾಳ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ ಆರೋಪಿ ತೇಜಸ್ ಪರಾರಿ ಆಗಿದ್ದಾನೆ. ಆರೋಪಿ ಯಾಕೆ ಕೊಲೆ ಮಾಡಿದ ಎಂಬ ವಿಚಾರ ಆರೋಪಿ ಬಂಧನದ ನಂತರವೇ ತಿಳಿಯಬೇಕಿದೆ.
ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







