ಪ್ರಿಯಕರನೊಂದಿಗೆ ಸೇರಿ ಗಂಡನ ಜೀವ ತೆಗೆಯಲು ಯತ್ನ.. ಹೆಂಡತಿ ಅರೆಸ್ಟ್

Views: 193
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನೊಂದಿಗೆ ಸೇರಿ ರಾತ್ರಿ ಮಲಗಿದ್ದ ತನ್ನ ಗಂಡನ ಕತ್ತು ಹಿಸುಕಿ ಜೀವ ತೆಗೆಯಲು ಹೆಂಡತಿ ಪ್ರಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ.
ಗಂಡ ಬೀರಪ್ಪ ಮಾಯಪ್ಪ ಜೀವ ತೆಗೆಯಲು ಯತ್ನಿಸಿದ ಹೆಂಡತಿ ಸುನಂದ. ಈಕೆಯ ಪ್ರಿಯಕರ ಸಿದ್ದಪ್ಪ ಕ್ಯಾತಕೇರಿ ದುಷ್ಕೃತ್ಯಕ್ಕೆ ಕೈ ಹಾಕಿದವರು.ಕೃತ್ಯಕ್ಕೆ ಯತ್ನಿಸಿದಾಗ ಮನೆಯ ಮಾಲೀಕರು ಬಂದಿದ್ದರಿಂದ ಹತ್ಯೆ ಯತ್ನ ವಿಫಲವಾಗಿದೆ.ಗಂಡ ಬೀರಪ್ಪ ಮಾಯಪ್ಪ
ಸಿದ್ದಪ್ಪ ಕ್ಯಾತಕೇರಿ ಎಂಬಾತನೊಂದಿಗೆ ಸುನಂದ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿ ಮಲಗಿದಾಗ ಗಂಡನ ಜೀವ ತೆಗೆಯಲು ಸುನಂದ ಪ್ಲಾನ್ ಮಾಡಿದ್ದಳು. ಅದರಂತೆ ಗಂಡ ಮಲಗಿದ್ದಾಗ ಪ್ರಿಯಕರನ ಜೊತೆಗೆ ಮತ್ತೊಬ್ಬನನ್ನು ಕರೆಯಿಸಿ ಕೊಲೆಗೆ ಯತ್ನಿಸಿದ್ದಾಳೆ. ಗಂಡನ ಎದೆ ಮೇಲೆ ಕುಳಿತು ಕತ್ತು ಹಿಸುಕಿ, ಮರ್ಮಾಂಗ ಹಿಸುಕಿ ಜೀವ ತೆಗೆಯಲು ಮುಂದಾಗಿದ್ದರು.
ಕತ್ತು ಹಿಸುಕುವಾಗ ಬೀರಪ್ಪ ಕಾಲಿನಿಂದ ಕೂಲರ್ ಅನ್ನು ಒದ್ದು ಶಬ್ಧ ಮಾಡಿದ್ದಾನೆ. ಶಬ್ಧ ಜೋರಾಗಿದ್ದರಿಂದ ಮನೆ ಮಾಲೀಕರು ಎಚ್ಚರಗೊಂಡಿದ್ದಾರೆ. ಬಳಿಕ ಇವರ ಮನೆ ಬಳಿ ಬಂದು ಮಾಲೀಕ ಬಾಗಿಲು ಬಡಿದಾಗ ಎಚ್ಚರಗೊಂಡು ಬೀರಪ್ಪನ 8 ವರ್ಷದ ಮಗ ಬಾಗಿಲು ತೆರೆದಿದ್ದಾನೆ. ಬಾಗಿಲು ಓಪನ್ ಆಗುತ್ತಿದ್ದಂತೆ ಪ್ರಿಯಕರ ಪರಾರಿಯಾಗಿದ್ದಾನೆ.
ಸುನಂದಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಪ್ಪಿಸಿಕೊಂಡಿರುವ ಪ್ರಿಯಕರನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.