ಪೊಲೀಸ್ ಪೇದೆ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ, ತಡವಾಗಿ ಬೆಳಕಿಗೆ

Views: 248
ದರ್ಶನ್ ಗ್ಯಾಂಗ್ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಶಾಸಕರ ಮನೆಯಲ್ಲಿ ಪೊಲೀಸ್ ಪೇದೆ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ ಮಾಡಿತ್ತು ಎನ್ನಲಾಗುತ್ತಿದೆ. ಬಳಿಕ ಗನ್‌ಮ್ಯಾನ್ ಜೊತೆ ರಾಜಿ ಮಾಡಿಸಲಾಗಿದ್ದರಿಂದ ವಿಚಾರ ಹೊರಬರಲಿಲ್ಲ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆ ಸಮಯದಲ್ಲಿ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಏಪ್ರಿಲ್ 22ರಂದು ನಟ ದರ್ಶನ್ ಸ್ಟಾರ್ ಚಂದ್ರು ಪರ ಮಂಡ್ಯದಲ್ಲಿ ಪ್ರಚಾರ ಮಾಡಲು ತೆರಳಿದ್ದರು. ಈ ವೇಳೆ ಮದ್ದೂರು ಶಾಸಕ ಉದಯ್ ಅವರ ಗನ್ ಮ್ಯಾನ್ ಆಗಿದ್ದ ನಾಗೇಶ್ ಜೊತೆ ದರ್ಶನ್ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.
ದರ್ಶನ್ ಗ್ಯಾಂಗ್‌ನ ಲಕ್ಷ್ಮಣ್, ನಾಗರಾಜು ಹಾಗೂ ಇತರರು ಸೇರಿ ಡಿಎಆರ್ ಪೇದೆ ನಾಗೇಶ್‌ನೊಂದಿಗೆ ಮುಖಂಡರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಇದೇ ಜಗಳ ಪಕೋಪಕ್ಕೆ ತಿರುಗಿ ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್ ಅವರ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ ಮಾಡಿತ್ತು.
ಹಲ್ಲೆ ವೇಳೆ ದರ್ಶನ್ ಗ್ಯಾಂಗ್ ಬಾಯಿಗೆ ಬಂದಂತೆ ಪೇದೆಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪೊಲೀಸರು ನಮ್ಮನ್ನು ಏನು ಮಾಡಲು ಆಗಲ್ಲ. ನಮ್ಮ ಹತ್ತಿರ ಏನು ಕಿತ್ತುಕೊಳ್ಳಲು ಆಗಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೇ ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ನಾಗೇಶ್ ಅವರು ಚಿಕಿತ್ಸೆ ಸಹ ಪಡೆದುಕೊಂಡಿದ್ದರು. ಹಲ್ಲೆ ಮಾಡಿದವರ ವಿರುದ್ಧ ಕಸ್ತೂರು ಪೊಲೀಸರು ಠಾಣೆಗೆ ನಾಗೇಶ್ ಅವರು ದೂರು ನೀಡಲು ಹೋಗಿದ್ದರಾದರೂ ಕೊಡಲಿಲ್ಲ
ಯಾಕೆಂದರೆ ಈ ವಿಚಾರ ದೊಡ್ಡದಾಗುತ್ತಿದ್ದಂತೆ ಸಂದಾನ ಮಾಡಿಕೊಳ್ಳುವ ನಿರ್ಧಾರಕ್ಕೆ ಡಿ ಗ್ಯಾಂಗ್ ಬಂದಿದೆ. ಸ್ವತ: ಶಾಸಕ ಉದಯ್ ಅವರು ರಾಜಿ ಸಂಧಾನ ಮಾಡಿ ನಾಗೇಶ್ ಅವರನ್ನು ಮನವೊಲಿಸಿದ್ದರು. ನಂತರ ಉದಯ್ ಗನ್ ಮ್ಯಾನ್ ಹುದ್ದೆಯಿಂದ ಹೊರಬಂದಿದ್ದ ನಾಗೇಶ್ ಅವರು ಈಗ ಡಿಎಆರ್ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.






