ಯುವಜನ
ಪಾರ್ಟಿಯಲ್ಲಿ ಇಬ್ಬರ ಮಧ್ಯೆ ಗಲಾಟೆ: ಬೈಕ್ ನಲ್ಲಿ ಬರುವಾಗ ಯುವತಿ ಸ್ಥಳದಲ್ಲೇ ಸಾವು
Views: 156
ಕನ್ನಡ ಕರಾವಳಿ ಸುದ್ದಿ:ಬೈಕ್ ಅಪಘಾತ ಸಂಭವಿಸಿ ದಾವಣಗೆರೆ ಮೂಲದ ಯುವತಿ ಪ್ರಿಯಾ (22) ಮೃತಪಟ್ಟಿದ್ದಾಳೆ.
ಮೃತ ಪ್ರಿಯಾ ಸ್ನೇಹಿತ ಯೋಗೆಶ್ ಜೊತೆ ಪಾರ್ಟಿಗೆ ತೆರಳಿದ್ದಳು. ಜರಕಟ್ಟೆಯಲ್ಲಿರುವ ಆಧ್ಯಾ ಹೋಟೆೆಲ್ಲಿಗೆ ಹೋದಾಗ ಸ್ನೇಹಿತ ಯೋಗೆಶ್ ಮತ್ತು ಪ್ರಿಯಾ ಮಧ್ಯೆ ವಾಗ್ವಾದ ನಡೆದಿದೆ. ನಂತರ ಪ್ರಿಯಾಳ ಮನವೊಲಿಸಿ ಬೈಕ್ ನಲ್ಲಿ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.
ಈ ವೇಳೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ಸ್ಥಳದಲ್ಲಿ ಯುವತಿ ಮೃತಪಟ್ಟರೆ ಯೋಗೆಶ್ ಗಂಭೀರ ಗಾಯಗೊಂಡಿದ್ದಾರೆ. ಮೃತ ಪ್ರಿಯಾ ಮತ್ತು ಯೋಗೆಶ್ ವಾಗ್ವಾದದ ಕೊನೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪಾರ್ಟಿಯಲ್ಲಿ ನಿಜಕ್ಕೂ ಇಬ್ಬರ ಮಧ್ಯೆ ಆಗಿರುವ ಗಲಾಟೆ ಏನು ಅನ್ನೋದು ತನಿಖೆಯಿಂದ ತಿಳಿದು ಬರಬೇಕಿದೆ.






