ಯುವಜನ

ಪಾರ್ಕ್ ಒಂದರಲ್ಲಿ ನಡೆಯಿತು “ಲವ್ ಅಂಡ್ ಬ್ರೇಕ್ ಅಪ್” ಕಥೆ!

Views: 163

ಬೆಂಗಳೂರು: ಪಾರ್ಕ್ ಒಂದರಲ್ಲಿ ನಡೆದ ಲವ್ ಅಂಡ್ ಬ್ರೇಕ್ ಅಪ್ ಕಥೆ ಇದು…ಹಿತೇಂದ್ರ ಕುಮಾರ್ ಅನ್ನೋರು ಜಯನಗರದಲ್ಲಿ ಅಂಗಡಿ ಒಂದನ್ನು ನಡೆಸುತ್ತಿದ್ದರು. ಮಹಿಳೆಯೊಬ್ಬರು ಅವರ ಅಂಗಡಿಗೆ ಕೆಲಸಕ್ಕೆ ಸೇರಿದ್ದರು.2-3 ತಿಂಗಳುಗಳ ಕಾಲ ಕೆಲಸ ಮಾಡಿದ್ದ ಅವರು, ನಂತರ ಡ್ಯೂಟಿಗೆ ಬಂದಿರಲಿಲ್ಲ.ನಂತರ ಹಿತೇಂದ್ರ, ಆ ಮಹಿಳೆಗೆ ಭೇಟಿಯಾಗಲು ಆಹ್ವಾನ ನೀಡಿದ್ದ. ಅಂತೆಯೇ ಇಬ್ಬರು ಬಿಟಿಎಂ ಲೇಔಟ್ನ ಪಾರ್ಕ್ ಒಂದರಲ್ಲಿ ಭೇಟಿಯಾಗಿದ್ದರು.

ಈ ವೇಳೆ ಮಹಿಳೆಗೆ ಹಿತೇಂದ್ರ ಕುಮಾರ್, ಲವ್ ಪ್ರಪೋಸ್ ಇಟ್ಟಿದ್ದಾನೆ. ಅದಕ್ಕೆ ಮಹಿಳೆ ಕೂಡ ಒಕೆ ಎಂದಿದ್ದಾಳೆ. ಅಂದು ಇಡೀ ದಿನ ಅದೇ ಪಾರ್ಕ್ನಲ್ಲಿ ಸುತ್ತಾಡಿ ಹೋಗಿದ್ದರು. ಮರು ದಿನ ಮತ್ತೆ ಭೇಟಿ ಆಗುವಂತೆ ಹಿತೇಂದ್ರ ಕರೆದಿದ್ದ. ಆಗ ಮಹಿಳೆಯ ಸ್ನೇಹಿತ ಸಿದ್ದು ಎಂಬಾತ ಅದೇ ಪಾರ್ಕ್ಗೆ ಎಂಟ್ರಿ ನೀಡಿದ್ದ.

ಇಬ್ಬರು ಪ್ರೇಮಿಗಳನ್ನು ನೋಡಿದ ಈತ, ರೋಸಿ ಹೋಗಿ ಕೋಪ ನೆತ್ತಿಗೇರಿತ್ತು ಸಿದ್ದು ಎಂಬಾತ ಹಿತೇಂದ್ರನಿಗೆ ಚಾಕು ಇರಿದಿದ್ದಾನೆ. ಹಿತೇಂದ್ರನ ಹೊಟ್ಟೆ, ಬೆನ್ನು ಸೇರಿ ಹಲವೆಡೆ ಚಾಕು ಚುಚ್ಚಿ ಗಾಯಗೊಳಿಸಿದ್ದಾನೆ. ಉದ್ದೇಶ ಪೂರ್ವಕವಾಗಿ ತನ್ನನ್ನು ಕೊಲೆ ಮಾಡಲು ಯತ್ನ ಮಾಡಿದ್ದಾರೆ ಅಂತಾ ಹಿತೇಂದ್ರ ಪ್ರೀತಿಸುತ್ತಿದ್ದ ಮಹಿಳೆಗೆ ಬ್ರೇಕ್ ಅಪ್ ನೀಡಿ ಠಾಣೆಯಲ್ಲಿ ಮಹಿಳೆ ಹಾಗೂ ಆಕೆಯ ಸ್ನೇಹಿತನ ವಿರುದ್ಧ ದೂರು ದಾಖಲಿಸಿದ್ದಾರೆ.

Related Articles

Back to top button
error: Content is protected !!