ಪರ ಪುರುಷನ ಜತೆ ಚಾಟಿಂಗ್ ಮಾಡಿ ಅನಾಹುತವನ್ನೇ ಸೃಷ್ಟಿಸಿದ್ದ ಮಹಿಳೆ ಕೇಸ್ಗೆ ಟ್ವಿಸ್ಟ್!

Views: 152
ಪರ ಪುರುಷನ ಜತೆ ಚಾಟಿಂಗ್ ಮಾಡಿ ಅನಾಹುತವನ್ನೇ ಸೃಷ್ಟಿಸಿದ್ದ ಮಹಿಳೆ ಕೇಸ್ಗೆ ಟ್ವಿಸ್ಟ್!
ಸುಂದರ ಸಂಸಾರ. ಈ ಮಧ್ಯೆ ಆ್ಯಪ್ನಲ್ಲಿ ಪರಪುರುಷನ ಜೊತೆ ಚಾಟಿಂಗ್ ಶುರುವಾಗಿತ್ತು. ಈ ವಿಚಾರ ಗಂಡನಿಗೂ ಗೊತ್ತಾಗಿತ್ತು. ಹೀಗೆ ರೆಡ್ ಹ್ಯಾಂಡಾಗಿ ಸಿಕ್ಕಾಕೊಂಡಿದ್ದ ಹೆಂಡ್ತಿ ಲವರ್ ಮಾತು ಕೇಳಿ ಪತಿ ಮೊಬೈಲ್ನಿಂದಲೇ ಪೊಲೀಸರಿಗೆ RDX ಬಾಂಬ್ ಇರೋದಾಗಿ ಮೆಸೇಜ್ ಕಳಿಸಿದ್ದಳು. ಈ ಕೇಸ್ಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಸೇಮ್ ಟು ಸೇಮ್ ಇದೇ ಥರಾ.. ಕೈಗೆ ಸಿಕ್ಕ ಫೋನ್ನಲ್ಲಿ ಸಿಕ್ಕ ಸಿಕ್ಕ ಆ್ಯಪ್ಗಳನ್ನ ಇನ್ಸ್ಟಾಲ್ ಮಾಡ್ಕೊಂಡು.. ಆನ್ಲೈನ್ನಲ್ಲಿ ಸಿಕ್ಕ ಬಾಯ್ಫ್ರೆಂಡ್ ಹಿಂದೆ ಬಿದ್ದಿದ್ದ ಗೃಹಿಣಿ.. ಲವರ್ ಮಾತು ಕೇಳಿ ಗಂಡನ ಫೋನ್ನಿಂದ ಪೊಲೀಸರಿಗೆ RDX ಬಾಂಬ್ ಇರೋದಾಗಿ ಮೆಸೇಜ್ ಸೆಂಡ್ ಮಾಡಿ, ಇವತ್ತು ಅತ್ತ ಗಂಡಾನೂ ಇಲ್ದೆ.. ಇತ್ತ ಬಾಯ್ಫ್ರೆಂಡೂ ಇಲ್ದೆ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದಾಳೆ..
ಉತ್ತರ ಕರ್ನಾಟಕ ಮೂಲದ ದಂಪತಿ ಆನೇಕಲ್ನಲ್ಲಿ ವಾಸವಿದ್ರು, ಈ ಮಧ್ಯೆ ಸೋಷಿಯಲ್ ಮೀಡಿಯಾದ ಌಪ್ನಲ್ಲಿ ರಾಮ್ಪ್ರಸಾದ್ ಪರಿಚಯವಾಗ್ತಾನೆ. ರಾಮ್ಪ್ರಸಾದ್ ಜೊತೆ ನಿರಂತರವಾಗಿ ಚಾಟ್ ಮಾಡ್ತಿದ್ದ ಮಹಿಳೆ, ಚಾಟಿಂಗ್ನ ವಿಚಾರ ಪತಿಗೆ ಗೊತ್ತಾಗಿ ಮೊಬೈಲ್ ಒಡೆದು ಹಾಕಿದ್ದ. ಬೇರೆ ನಂಬರ್ ಮೂಲಕ ಇದನ್ನ ರಾಮ್ಪ್ರಸಾದ್ಗೆ ಮಹಿಳೆ ತಿಳಿಸಿದ್ಲು, ನಂತರ ಮಹಿಳೆಗೆ ಮೆಸೇಜ್ ಮಾಡಿದ್ದ ರಾಮ್ಪ್ರಸಾದ್ ಸ್ನೇಹಿತ, ರಾಮ್ಗೆ ಮೆಸೇಜ್ ಮಾಡದಿದ್ರೆ ನಿನ್ನ ಗಂಡನನ್ನ ಸಾಯಿಸುತ್ತೇನೆ, ಸ್ಟೇಷನ್ಗೆ ಹೋಗಿ ನಿನ್ನ ಹೆಸರನ್ನ ಹೇಳಿ ಸರೆಂಡರ್ ಆಗುತ್ತೇನೆ ಅಂತ ಬೆದರಿಕೆ ಹಾಕಿದ್ದ. ಇದಕ್ಕೆ ಹೆದರಿ ಮಹಿಳೆ ಮತ್ತೆ ಚಾಟಿಂಗ್ ಶುರು ಮಾಡಿದ್ಲು, ಆಗ ಅಜಿತ್, ರಾಮ್ಪ್ರಸಾದ್ ಮಹಿಳೆಗೆ ಮತ್ತೊಂದು ಐಡಿಯಾ ಕೊಟ್ಟಿದ್ರು, ಅದರಂತೆ ಡಿಸಂಬರ್ 5ರಂದು ಆರ್ಡಿಎಕ್ಸ್ ಬಾಂಬ್ ಸ್ಫೋಟಿಸೋ ಮೇಸೆಜ್ ಅನ್ನ ಗಂಡನ ನಂಬರ್ನಿಂದ ತನಿಖಾ ಸಂಸ್ಥೆಗಳಿಗೆ ಕಳುಹಿಸಿ ಮೊಬೈಲ್ನಿಂದ ಮೆಸೇಜ್ನ ಡಿಲೀಟ್ ಮಾಡಿದ್ಲು.
ಹೀಅಥಗೆ ಸಂದೇಶ ಬಂದ ನಂಬರ್ ಮೂಲ ಹುಡುಕಿ ಹೊರಟಿದ್ದ ತನಿಖಾ ಸಂಸ್ಥೆಗೆ ಮಹಿಳೆಯ ಗಂಡ ಸಿಕ್ಕಿಬಿದ್ದಿದ್ದ. ಬಳಿಕ ಪತಿಯನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ರು, ವಿಚಾರಣೆ ವೇಳೆ ಈ ಕೃತ್ಯ ಪತ್ನಿ ಎಸಗಿರೋದಾಗಿ ಗಂಡ ಶಂಕೆ ವ್ಯಕ್ತಪಡಿಸಿದ್ದ. ಬಳಿಕ ಪತ್ನಿಯನ್ನ ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.
ಇನ್ನು, ಆನೇಕಲ್ ಠಾಣೆಯಲ್ಲಿ ಕೇಸ್ ಸಂಬಂಧ ಎಫ್ಐಆರ್ ದಾಖಲಾಗಿದ್ದು, ರಾಮ್ಪ್ರಸಾದ್ ಹಾಗೂ ಅವನ ಸ್ನೇಹಿತನನ್ನು ಪೊಲೀಸ್ರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ ಎನ್ನಲಾಗಿದೆ.






