ಯುವಜನ

ಪರೀಕ್ಷಾ ಶುಲ್ಕ ಪಾವತಿಸಲಾಗದೆ ತರಗತಿ ಕೊಠಡಿಯಲ್ಲೇ ಬೆಂಕಿ ಹಚ್ಚಿಕೊಂಡು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ 

Views: 81

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯ ಬುಧಾನಾ ಪಟ್ಟಣದಲ್ಲಿ ಡಿಎವಿ ಪಿಜಿ ಕಾಲೇಜಿನ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಯೋರ್ವ ಕಾಲೇಜಿನ ತರಗತಿ ಕೊಠಡಿಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ಘಟನೆ ನಡೆದಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಉಜ್ವಲ್ ಆರ್ಥಿಕ ಸಂಕಷ್ಟದ ಕಾರಣದಿಂದ ಪರೀಕ್ಷಾ ಶುಲ್ಕ ಪಾವತಿಸಲು ಸಾಧ್ಯವಾಗದೆ, ಕಾಲೇಜು ಆಡಳಿತದಿಂದ ಪರೀಕ್ಷೆಗೆ ಬರೆಯಲು ನಿರಾಕರಿಸಿದ್ದರು ಎನ್ನಲಾಗಿದೆ.

ಘಟನೆಯ ನಂತರ ಉಜ್ವಲ್‌ನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತನ ಸ್ಥಿತಿ ಗಂಭೀರವಾಗಿದ್ದ ಕಾರಣ ದೆಹಲಿಯ ಸಫರ್ಜಂಗ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ವೈದ್ಯಕೀಯ ಚಿಕಿತ್ಸೆಯಾದರೂ, ಆತ ತಡರಾತ್ರಿ ಸಾವನಪ್ಪಿದ್ದಾನೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆತ್ಮಹತ್ಯೆಗೆ ಮೊದಲು ಉಜ್ವಲ್ ಡೆತ್‌ನೋಟ್ ಮತ್ತು ವೀಡಿಯೋ ಸಂದೇಶವನ್ನು ಬರೆದಿಟ್ಟು, ಕಾಲೇಜು ಪ್ರಾಂಶುಪಾಲರು ಹಾಗೂ ಮೂವರು ಪೊಲೀಸರನ್ನು ತನ್ನ ಸಾವಿಗೆ ಕಾರಣವೆಂದು ಆರೋಪಿಸಿದ್ದಾನೆ. ಅವನ ಹೇಳಿಕೆಯಲ್ಲಿ ದೈಹಿಕ ಹಲ್ಲೆ, ಅವಮಾನ ಮತ್ತು ಬೆದರಿಕೆ ನೀಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.

Related Articles

Back to top button