ಪತ್ನಿಯನ್ನು ಕೊಂದ ಪತಿರಾಯ: ಎರಡು ರಾತ್ರಿ ಶವದ ಜೊತೆಗೆ ಕಳೆದ ಪತಿ ವಾಸನೆ ಬರುತ್ತಿದ್ದಂತೆ ಪರಾರಿ

Views: 141
ಕನ್ನಡ ಕರಾವಳಿ ಸುದ್ದಿ : ಪತ್ನಿಯನ್ನು ಕೊಲೆ ಮಾಡಿದ ಪತಿರಾಯ ಎರಡು ದಿನಗಳ ಕಾಲ ಶವದ ಜೊತೆಗೆ ಕಳೆದು ದುರ್ವಾಸನೆ ಬರುತ್ತಿದ್ದಂತೆ ಊರು ಬಿಟ್ಟು ಪರಾರಿಯಾಗಿರುವ ಘಟನೆ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಸಾಕ್ಷಿ ಕಂಬಾರ ಕೊಲೆಯಾದ ದುರ್ದೈವಿ. ಆಕಾಶ ಕಂಬಾರ ಕೊಲೆ ಆರೋಪಿ.
ಮೇ. 24ರಂದು ಅದ್ದೂರಿಯಾಗಿ ಆಕಾಶ್ ಸಾಕ್ಷಿ ಅವರನ್ನು ಮದುವೆಯಾಗಿದ್ದ. ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕಾಶ ಒಂದು ಲಕ್ಷಕ್ಕಿಂತ ಹೆಚ್ಚು ಸಂಬಳ ಇದೆ ಅಂತಾ ಸುಳ್ಳು ಹೇಳಿ ವಿವಾಹ ಬಂಧಕ್ಕೆ ಒಳಗಾಗಿದ್ದ. ಐವತ್ತು ಗ್ರಾಂ ಚಿನ್ನ ಹಾಗೂ ಐದು ಲಕ್ಷ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ. ಇದೇ ಕಾರಣಕ್ಕೆ ಆಕೆಯನ್ನ ಕೊಲೆ ಮಾಡಿದ್ದಾಗಿ ಆರೋಪಿಸಿ, ಕೊಲೆಯಾದ ಸಾಕ್ಷಿ ಕುಟುಂಬಸ್ಥರು ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಪರಾರಿಯಾಗಿರುವ ಗಂಡ ಆಕಾಶ್ಗಾಗಿ ಬಲೆ ಬೀಸಿದ್ದಾರೆ. ಇತ್ತ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಸಾಕ್ಷಿ ಮೃತದೇಹ ಹಸ್ತಾಂತರ ಮಾಡಿದ್ದು, ಇಂದು ಸಂಜೆ ವೇಳೆ ಅಂತ್ಯಸಂಸ್ಕಾರ ನೆರವೇರಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.