ಸಾಂಸ್ಕೃತಿಕ

ನಟ ದರ್ಶನ್ ಅಭಿಮಾನಿಗಳಿಂದ ನಟಿ ರಮ್ಯಾಗೆ ಅವಹೇಳನಕಾರಿ ಮೆಸೇಜ್: ಮಹಿಳಾ ಆಯೋಗಕ್ಕೆ ದೂರು

Views: 43

ಕನ್ನಡ ಕರಾವಳಿ ಸುದ್ದಿ: ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ ವಿಚಾರವಾಗಿ ನಟಿ ರಮ್ಯಾ ಬೆನ್ನಿಗೆ ಇದೀಗ ಮಹಿಳಾ ಆಯೋಗ ನಿಂತುಕೊಂಡಿದ್ದು, ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಬೆಂಗಳೂರು ಪೊಲೀಸ್‌ ಕಮಿಷನರಿಗೆ ಪತ್ರ ಬರೆದಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ನಟಿ ರಮ್ಯಾ ತಮ್ಮ ಅಭಿಪ್ರಾಯವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ ರಮ್ಯಾ ಅವರಿಗೆ ದರ್ಶನ್‌ ಅಭಿಮಾನಿಗಳು ಕೆಟ್ಟ ಕೆಟ್ಟದಾಗಿ ಮೆಸೇಜ್‌ಗಳನ್ನು ಮಾಡಿದ್ದಾರೆ. ಈ ಸ್ಕ್ರೀನ್‌ಶಾಟ್‌ ಅನ್ನು ಹಂಚಿಕೊಂಡು, ರಮ್ಯಾ ಇದೀಗ ಚಳಿ ಬಿಡಿಸಿದ್ದಾರೆ.

ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.

ಈ ವಿಚಾರವಾಗಿ ನಾಗಲಕ್ಷ್ಮಿ ಚೌದರಿ ಮಾತನಾಡಿದ್ದು, ಮನಸ್ಸಿಗೆ ತಕ್ಕಂತೆ ಕಮೆಂಟ್ ಮತ್ತು ಪೋಸ್ಟ್ ಮಾಡೋದು ತಪ್ಪು. ನಟಿ ರಮ್ಯಾ ನಮಗೇನು ಕಾಲ್ ಮಾಡಿಲ್ಲ ಈ ವಿಷಯಗಳಲ್ಲಿ ಯಾರು ಕಾಲ್ ಮಾಡಬೇಕು ಅಂತ ಇಲ್ಲ. ದರ್ಶನ್ ಅಭಿಮಾನಿಗಳ ವಿರುದ್ಧ ನಾನು ಮಾತನಾಡಲ್ಲ ಮಹಿಳೆಯರಿಗೆ ಅನ್ಯಾಯವಾದಾಗ ಆಯೋಗ ಬರುತ್ತದೆ ಎಂದು ನಾಗಲಕ್ಷ್ಮಿ ಚೌದರಿ ತಿಳಿಸಿದ್ದಾರೆ.

Related Articles

Back to top button
error: Content is protected !!